24.6 C
Karnataka
Thursday, April 17, 2025

ಚಾರಿಟಿ ಟ್ರೋಫಿ 2025 : ಪಾಲಡ್ಕಾ ಪ್ರಥಮ, ಪೆರ್ಮನೂರ್ ದ್ವಿತೀಯ

ಮ೦ಗಳೂರು: ವೆಲ್ಫೇರ್ ಏಸೋಸಿಯೇಷನ್ ರಾಣಿಪುರ ಮುಂದಾಳತ್ವದಲ್ಲಿ ದೇರಳಕಟ್ಟೆಪಾದರ್ ಮುಲ್ಲರ್ ಹೋಮಿಯೋಪತಿ ಮೈದಾನದಲ್ಲಿ ನಡೆದ ಇಂಟರ್ ಪ್ಯಾರಿಷ್ ಚ್ಯಾರಿಟಿ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಸೇಂಟ್ ಲೋಯೋಲಾ ಚರ್ಚ ಪಾಲಡ್ಕಾ ವಿನ್ನರ್ ಆಗಿದ್ದು, ಸೇಂಟ್ ಸೆಬೆಸ್ಟಿಯನ್ ಚರ್ಚ್ ಪೆರ್ಮನೂರ್ ರನ್ನರ್ ಪಟ್ಟವನ್ನು ಪಡೆದುಕೊ೦ಡಿದೆ. ಬಡವರು, ಹಾಗೂ ವಿವಿಧ ರೋಗಗಳಿಂದ ಬಳಲುವ ಬಡ ರೋಗಿಗಳಿಗೆ ಸಹಾಯ ಹಸ್ತವನ್ನು ನೀಡುವ ಉದ್ದೇಶದಿಂದ ರಾಣಿಪುರ ವೆಲ್ಪೇರ್ ಏಸೋಸಿಯೇಷನ್ ಈ ಚಾರಿಟಿ ಟ್ರೋಫಿ ಪಂದ್ಯಾಟವನ್ನು ಆಯೋಜಿಸಿತ್ತು . ಫಾದರ್ ಪಾವೊಸ್ತಿನ್ ಲೂಕಸ್ ಲೋಬೊ, ಆಡಳಿತ ಅಧಿಕಾರಿ ಫಾ ಮುಲ್ಲರ್ ಹೋಮಿಯೋಪತಿ ಅವರು ಕ್ರಿಕೆಟ್ ಪಂದ್ಯಾಟವನ್ನು ಉದ್ಗಾಟಿಸಿ ಶುಭಹಾರೈಸಿದರು. ಈ ಸಂಧರ್ಭದಲ್ಲಿ ಸ್ಥಾಪಕ ಅಧ್ಯಕ್ಷರಾದ ಜೋಸೆಫ್ ಪಾವ್ಲ್ ಲೋಬೋ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವೆಲ್ಫೇರ್ ಎಸೋಸಿಯೇಷನ್ ಅಧ್ಯಕ್ಷರಾದ ಫೆಲಿಕ್ಷ್ ಮೊಂತೇರೋ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಸಾಹಿತಿ ಹಾಗೂ ಪೋಕಸ್ ಇಂಡಿಯಾ ಸಂಘಟನೆಯ ಅಧ್ಯಕ್ಷ ವಿನೋದ್ ಪಿಂಟೋ ತಾಕೋಡೆ , ರೂಪೇಶ್ ನಿಲಿಮಾ ದಂಪತಿಗಳು ರಾಣಿಪುರ, ಗ್ರೇಸಿ ಮೊಂತೇರೊ ರಾಣಿಪುರ , ಚಾರಿಟಿ ಟ್ರೋಫಿ ಸಂಚಾಲಕರಾದ ಜೀವನ್ ಪೆರಾವೊ, ಕೋಶಾಧಿಕಾರಿ ಟೈಟಸ್ ಡಿಸೋಜ ಕಾರ್ಯದರ್ಶಿ ಆಲ್ವಿನ್ ಡಿಸೋಜ ವೇದಿಕೆಯಲ್ಲಿದ್ದರು, ಅಧ್ಯಕ್ಷ ರಾದ ಫೆಲಿಕ್ಸ್ ಮೊಂತೇರೋ ಸ್ವಾಗತಿಸಿದರು ಈ ಸಂದರ್ಭದಲ್ಲಿ ಸರಿ ಸುಮಾರು 20 ಬಡ ರೋಗಿಗಳಿಗೆ ಹಾಗೂ ಅಶಕ್ತರಿಗೆ ಸಹಾಯ ಹಸ್ತವನ್ನು ಚೆಕ್ ಗಳ ಮುಕಾಂತರ ನೀಡಲಾಯಿತು.ಕಾರ್ಯದರ್ಶಿ ಆಲ್ವಿನ್ ಡಿಸೋಜ ವಂದಿಸಿದರು.
ಡೆಲನ್ ಲೋಬೋ ನಿರೂಪಿಸಿದರು.

ಗೆದ್ದ ತಂಡಗಳ ವಿವರ
ವಿನ್ನರ್ :ಸೈಂಟ್ ಲೋಯೋಲಾ ಚರ್ಚ್ ಪಾಲಡ್ಕ ,ಟ್ರೋಫಿ ಹಾಗೂ 30 ಸಾವಿರ ನಗದು

ರನ್ನರ್ :ಸೇಂಟ್ ಸೆಬೇಸ್ಟಿಯನ್ ಚರ್ಚ್ ಪೆರ್ಮನೂರ್ ಟ್ರೋಫಿ ಹಾಗೂ 20 ಸಾವಿರ ನಗದು
ತೃತೀಯ :MYC ಮರೀಲ್ ಹಾಗೂ ಪೆರ್ಮನೂರ್ ಸ್ಟೋರ್ಟ್ಸ್ ಕ್ಲಬ್

ವೈಯುಕ್ತಿಕ ಬಹುಮಾನಗಳು :ಮ್ಯಾನ್ ಆಪ್ ದಿ ಮ್ಯಾಚ್ ನಿತಿನ್ ಪಾಲಡ್ಕ

ಮ್ಯಾನ್ ಆಫ್ ಧಿ ಸೀರಿಸ್ ಮತ್ತು ಬೆಸ್ಟ್ ಬ್ಯಾಟ್ಸ್ಮನ್ :ಗ್ಲೆನ್ ಸನ್ ಪಾಲಡ್ಕ

ಬೆಸ್ಟ್ ಬೌವ್ಲರ್ : ಕೊನ್ವೆಲ್ ಪೆರ್ಮನೂರ್.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles