18.5 C
Karnataka
Friday, November 22, 2024

ಭಾರತ ಸೇವಾದಳ ವತಿಯಿಂದ ನೆಹರೂ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆ

ಮಂಗಳೂರು: ಭಾರತ ಸೇವಾದಳ ವತಿಯಿಂದ ನ. 14ರಂದು ನಗರದ ಪಾಂಡೇಶ್ವರದಲ್ಲಿರುವ ಯೂನಿಯನ್ ಬ್ಯಾಂಕ್ ಎದುರುಗಡೆ ಇರುವ ನೆಹರೂ ಪಾರ್ಕ್ ನಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ಸೇವಾದಳ ಅಧ್ಯಕ್ಷ ಪ್ರಭಾಕರ್ ಶ್ರೀಯನ್ ಮಾತನಾಡಿ, ನೆಹರೂರವರು ಪ್ರಧಾನಿಯಾಗಿ ದೇಶಕ್ಕೆ ಅನೇಕ ಯೋಜನೆಗಳನ್ನು ಹುಟ್ಟು ಹಾಕಿದ್ದರು. ಮಕ್ಕಳೆಂದರೆ ಅವರಿಗೆ ಪಂಚ ಪ್ರಾಣ. ಆದ್ದರಿಂದ ತನ್ನ ಜನ್ಮದಿನದಂದು ಮಕ್ಕಳ ದಿನಾಚರಣೆಯನ್ನು ಆಚರಿಸಬೇಕೆಂದು ಹೇಳಿದ್ದರು. ದೇಶದ ಭವಿಷ್ಯದಲ್ಲಿ ಮಕ್ಕಳ ಪಾತ್ರ ಮಹತ್ವ. ಮಕ್ಕಳು ವಿದ್ಯಾವಂತರಾಗಬೇಕು. ಶಿಕ್ಷಣದ ಮೂಲಕ ದೇಶದ ಭವಿಷ್ಯ ರೂಪಿಸಬಹುದು. ಇದಕ್ಕೋಸ್ಕರ ನೆಹರೂರವರು ಅನೇಕ ವಿದ್ಯಾ ಸಂಸ್ಥೆಗಳನ್ನು ಹುಟ್ಟು ಹಾಕಿದ್ದರು. ಆದ್ದರಿಂದ ಮಕ್ಕಳು ವಿದ್ಯಾವಂತರಾಗಿ ದೇಶವನ್ನು ಮುನ್ನೆಡೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕರೆ ನೀಡಿದರು.


ನೆಹರೂರವರ ಪ್ರತಿಮೆಗೆ ಸೇವಾದಳ ಕೇಂದ್ರ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿಯವರು ಪುಷ್ಪಾರ್ಚನೆಗೈದರು. ಸೇವಾದಳ ಜಿಲ್ಲಾ ಕಾರ್ಯದರ್ಶಿ ಟಿ. ಕೆ. ಸುಧೀರ್, ಜಿಲ್ಲಾ ಸಂಘಟಕ ಮಂಜೇಗೌಡ, ಪದಾಧಿಕಾರಿಗಳಾದ ಉದಯ್ ಕುಂದರ್, ಪ್ರೇಮ್ ಚಂದ್, ಕೃತಿನ್ ಕುಮಾರ್, ಸುನಿಲ್ ದೇವಾಡಿಗ, ಬೆಂಗ್ರೆ ಸರಕಾರಿ ಶಾಲೆ ಅಧ್ಯಕ್ಷ ರಾಕೇಶ್, ಶಾಲಾ ಶಿಕ್ಷಕಿಯರಾದ ಹರೀನಾಕ್ಷಿ, ಸುಮಾ ಮತ್ತು ನಗರದ ಬೆಂಗ್ರೆ ಸರಕಾರಿ ಶಾಲೆ ಮತ್ತು ಮುಲ್ಲಾಕಾಡು ಸರಕಾರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles