ಮಂಗಳೂರು: ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ – 2024ರ ಅಂಗವಾಗಿ ಜಿಲ್ಲಾ ಮಟ್ಟದ ಪಾಕ ಸ್ಪರ್ಧೆ ಕಾರ್ಯಕ್ರಮ ಸೋಮವಾರ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆಯಿತು.
ಜಿಲ್ಲಾ ಮಟ್ಟದ ಪಾಕ ಸ್ಪರ್ಧೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸುಮಾರು 46 ಸ್ಪರ್ಧಿಗಳು ಭಾಗವಹಿಸಿದ್ದರು. ವಿವಿಧ ಸಿರಿ ಧಾನ್ಯಗಳಿಂದ ತಯಾರಿಸಲ್ಪಟ್ಟ ಬಗೆ ಬಗೆಯ ತಿಂಡಿ ತಿನಿಸು ಖಾದ್ಯಗಳನ್ನು ಸ್ಪರ್ಧಿಗಳು ತಯಾರಿಸಿದ್ದರು. ಸಿರಿ ಧಾನ್ಯಗಳ ವಿವಿಧ ಸಿಹಿ ಮತ್ತು ಖಾರ ತಿಂಡಿಗಳು, ವಿವಿಧ ರೀತಿಯ ಭೋಜನಗಳು, ಪಾಯಸ, ಪೇಯಗಳನ್ನು ತಯಾರಿಸಿ, ಪ್ರದರ್ಶನಕ್ಕಿಡಲಾಗಿತ್ತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಬಿ.ಎ. ಖಾದರ್ ಶಾ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕರಾದ ಶಿವಶಂಕರ್ ದಾನೇಕಾರ್, ಮಂಗಳೂರು ತಾ. ಸಹಾಯಕ ಕೃಷಿ ನಿರ್ದೇಶಕಿ ವೀಣಾ ಮತ್ತಿತರರು ಭಾಗವಹಿಸಿದ್ದರು.
