ಮಂಗಳೂರು: ಮಂಗಳೂರಿನ ಕಾಸ್ಮೋಪೋಲಿಟನ್ ಕ್ಲಬ್ ಆಯೋಜಿಸಿದ್ದ ದ.ಕ ಮತ್ತು ಉಡುಪಿ ಜಿಲ್ಲೆಗಳ ಅಂತರ್ ಜಿಲ್ಲಾ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪಂದ್ಯಾಟಗಳ ಬಹುಮಾನ ವಿತರಣಾ ಸಮಾರಂಭ ಶನಿವಾರ ಸಂಜೆ ಕ್ಲಬ್‌ನ ಸಭಾಂಗಣದಲ್ಲಿ ನಡೆಯಿತು.
ಸ್ನೂಕರ್ ಪಂದ್ಯಾಟದಲ್ಲಿ ಜೈಕಿಶನ್ ವಿಜಯಿಯಾಗಿದ್ದು, ರನ್ನರ್ ಅಪ್ ಆಗಿ ರವೀಂದ್ರ ಶೆಟ್ಟಿ ಹಾಗೂ ಅತ್ಯಧಿಕ ಬ್ರೇಕ್ ಪಡೆದವರಾಗಿ ಜೈಕಿಶನ್ ಬಹುಮಾನಗಳನ್ನು ಪಡೆದರು.
ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ 2024 ಪಂದ್ಯಾಟದಲ್ಲಿ ಯೋಗೀಶ್ ಕುಮಾರ್ ಚಾಂಪಿಯನ್ ಆಗಿದ್ದು, ರನ್ನರ್ ಅಪ್- ಮೆಹುಲ್ ಕರಿಯ ಮತ್ತು ಅತ್ಯಧಿಕ ಬ್ರೇಕ್ ಪಡೆದವರಾಗಿ ಮನೋಜ್ ಕುಮಾರ್ ಪಾರಿತೋಷಕಗಳನ್ನು ಪಡೆದರು.ಇದೇ ಸಂದರ್ಭದಲ್ಲಿ ಕಾಸ್ಮೋಪೋಲಿಟನ್ ಕ್ಲಬ್ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಲಾಗಿದ್ದ ವಿವಿಧ ಪಂದ್ಯಾಟಗಳ ವಿಜೇತರಿಗೆ ಬಹುಮಾನ ವಿತರಣೆಯೂ ನಡೆಯಿತು.
ಚೆಸ್ ಪಂದ್ಯಾಟದಲ್ಲಿ- ಎ. ಪ್ರಭಾಕರ್ ಶೆಟ್ಟಿ (ವಿಜೇತರು), ಅಜಯ್ ಪಿ ರಾವ್ (ರನ್ನರ್ ಅಪ್); ಕೇರಂ ಪಂದ್ಯಾಟದಲ್ಲಿ- ನಾಸಿರ್ (ವಿಜೇತರು), ಅಜಯ್ ಪಿ. ರಾವ್ (ರನ್ನರ್ ಅಪ್); ಟೇಬಲ್ ಟೆನಿಸ್ ಸಿಂಗಲ್ಸ್ ಟೂರ್ನಮೆಂಟ್‌ನಲ್ಲಿ- ಆನಂದ್ ಡಿ’ಸೋಜ (ವಿಜೇತರು), ನಾಸಿರ್ (ರನ್ನರ್ ಅಪ್); ಮನೋರಂಜನೆ ವಿಭಾಗದಲ್ಲಿ- ಪ್ರದೀಪ್ ರೈ (ವಿಜೇತರು), ರಘುರಾಮ್ ಶೆಟ್ಟಿ (ರನ್ನರ್ ಅಪ್); ಬಿಲಿಯರ್ಡ್ಸ್ (ಓಪನ್) ಟೂರ್ನಮೆಂಟ್‌ನಲ್ಲಿ- ಮೆಹುಲ್ ಕರಿ (ವಿಜೇತರು), ಯೋಗೀಶ್ ಕುಮಾರ್ (ರನ್ನರ್ ಅಪ್), ಯೋಗೀಶ್ ಕುಮಾರ್ (ಅತ್ಯಧಿಕ ಬ್ರೇಕ್ ಪಡೆದವರು); ಸ್ನೂಕರ್ (ಓಪನ್) ಪಂದ್ಯಾಟದಲ್ಲಿ- ಮೆಹುಲ್ ಕರಿಯ (ವಿಜೇತರು), ಇಂದಿರಾ ಪಿ.ವಿ ಹೆಗ್ಡೆ (ರನ್ನರ್ ಅಪ್), ಯೋಗೀಶ್ ಕುಮಾರ್ (ಅತ್ಯಧಿಕ ಬ್ರೇಕ್ ಪಡೆದವರು); ಬಿಲಿಯರ್ಡ್ಸ್ (70 ವರ್ಷ ಮೇಲ್ಪಟ್ಟವರ ವಿಭಾಗದ) ನಲ್ಲಿ- ಸಿ.ಜೆ ಸೈಮನ್ (ವಿಜೇತರು), ಇಂದಿರಾ ಪಿ.ವಿ ಹೆಗ್ಡೆ (ರನ್ನರ್ ಅಪ್); ಸ್ನೂಕರ್ (70 ವರ್ಷ ಮೇಲ್ಪಟ್ಟವರ ವಿಭಾಗ) ದಲ್ಲಿ- ಇಂದಿರಾ ಪಿ.ವಿ ಹೆಗ್ಡೆ (ವಿಜೇತರು), ಗೋಪಾಲ್ ಸುವರ್ಣ (ರನ್ನರ್ ಅಪ್); ಶಟಲ್ ಬ್ಯಾಡ್ಮಿಂಟನ್ (ಡಬಲ್ಸ್) ಟೂರ್ನಮೆಂಟ್‌ನಲ್ಲಿ- ಪ್ರವೀಣ್ ಕುಮಾರ್ ಮತ್ತು ಐವಾನ್ ಪತ್ರಾವೊ (ವಿಜೇತರು), ಮನೋಜ್ ಕುಮಾರ್ ಮತ್ತು ರಾಜೇಶ್ ಆಚಾರ್ (ರನ್ನರ್ ಅಪ್) ಆಗಿ ಹೊರಹೊಮ್ಮಿದ್ದು ಈ ಎಲ್ಲ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕ್ಲಬ್‌ನ ಅಧ್ಯಕ್ಷರಾದ ಡಾ. ಎ. ಸದಾನಂದ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಕ್ಲಬ್‌ನ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರಿನ ಕಾಸ್ಮೋಪೋಲಿಟನ್ ಕ್ಲಬ್ 123 ವರ್ಷಗಳನ್ನು ಪೂರೈಸಿದ್ದು, ನಗರದ ಅತ್ಯಂತ ಹಿರಿಯ ಕ್ಲಬ್ ಆಗಿದೆ. ಶತಮಾನದ ಇತಿಹಾಸದುದ್ದಕ್ಕೂ ಹಲವು ಉತ್ತಮ ಕಾರ್ಯಗಳನ್ನು ನಡೆಸುತ್ತ ಬಂದಿರುವ ಈ ಕ್ಲಬ್ ಪ್ರತಿ ವರ್ಷ ಹಲವಾರು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತ ಹೊಸ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದೆ. ಅಲ್ಲದೆ ವಿಶ್ವದಲ್ಲೇ ಖ್ಯಾತಿ ಪಡೆದ ಆಟಗಾರರು ಕೂಡ ಈ ಕ್ಲಬ್‌ನಲ್ಲಿ ಬಂದು ಆಟಗಳನ್ನು ಆಡಿರುವುದು ಇದರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ಹೇಳಿದರು.