ಮೂಡುಬಿದಿರೆ: ಗ್ರಾಹಕರ ಉಳಿತಾಯ ಖಾತೆ ಹಾಗೂ ವಿಮಾ ಪಾಲಿಸಿಗಳಲ್ಲಿ ಜಮಾ ಮಾಡಲು ನೀಡಿದ್ದ ಹಣವನ್ನುಕಡಂದಲೆ ಶಾಖಾ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕನಾಗಿದ್ದ ವ್ಯಕ್ತಿಯೋವ೯ ಅಂಚೆ ಇಲಾಖೆಯ ಲೆಕ್ಕಕ್ಕೆ ಜಮಾ ಮಾಡದೆ ತನ್ನ ಸ್ವಂತ ಉಪಯೋಗಕ್ಕೆ ಬಳಸಿ ವಂಚನೆ ಮಾಡಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿ ಅಶೋಕ ಎಂಬಾತನು ದಿನಾಂಕ 6-9-2010 ರಿಂದ ದಿನಾಂಕ 19-6-2021 ರ ವರೆಗೆ ಕಡಂದಲೆ ಶಾಖಾ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಆತ ಕರ್ತವ್ಯ ನಿರ್ವಸುತ್ತಿದ್ದ ಅವಧಿಯಲ್ಲಿ 22 ಗ್ರಾಹಕರ 25 ಉಳಿತಾಯ ಖಾತೆ ಹಾಗೂ 4 ಗ್ರಾಹಕರ 6 ವಿಮಾ ಪಾಲಿಸಿಗಳಲ್ಲಿ ಜಮಾ ಮಾಡಲು ನೀಡಿದ ಹಣವನ್ನು ಪಡೆದುಕೊಂಡು ಸಂಬಂಧಪಟ್ಟ ಖಾತೆದಾರರ ಪಾಸ್ ಪುಸ್ತಕಗಳಲ್ಲಿ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ ಪುಸ್ತಕದಲ್ಲಿ ನಮೂದಿಸಿ ಪಡೆದುಕೊಂಡ ಹಣದ ವಿವರಗಳನ್ನು ಇಲಾಖೆಯ ದಾಖಲೆಗಳಲ್ಲಿ ನಮೂದಿಸದೆ, ಅಂಚೆ ಇಲಾಖೆಯ ಲೆಕ್ಕಕ್ಕೆ ಜಮಾ ಮಾಡದೆ ತನ್ನ ಸ್ವಂತ ಉಪಯೋಗಕ್ಕೆ ಬಳಸಿ ವಂಚನೆ ಮಾಡಿರುವುದಾಗಿ ಬಂಟ್ವಾಳ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.