17.9 C
Karnataka
Saturday, November 23, 2024

ಉರ್ವಾಸ್ಟೋರ್:ಚೂರಿ ತೋರಿಸಿ ಮೊಬೈಲ್ ಮತ್ತು ಹಣ ಸುಲಿಗೆ

ಮ೦ಗಳೂರು: ಕೆಲಸ ಮುಗಿಸಿ, ಉರ್ವಾಸ್ಟೋರ್ ನ ತಮ್ಮ ರೂಮಿನ ಕಡೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ನೌಕರನಿಗೆ ಚೂರಿ ತೋರಿಸಿ, ಬೆದರಿಸಿ ಮೊಬೈಲ್ ಮತ್ತು ಹಣವನ್ನು ಸುಲಿಗೆ ಮಾಡಿರುವ ಘಟನೆ ಸೋಮವಾರ
ನಡೆದಿದೆ.
ಸೋಮವಾರ ರಾತ್ರಿ 10 ರ ವೇಳೆಗೆ ಭರತ್ ಎ೦ಬವರು ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಕ್ಲೀನಿಂಗ್ ಕೆಲಸ ಮುಗಿಸಿ, ತಮ್ಮ ರೂಮಿನ ಕಡೆಗೆ ಹೋಗಲು ಉರ್ವಾಸ್ಟೋರ್ ನ ಪಿ.ಡಬ್ಲೂ.ಡಿ. ಕ್ವಾಟ್ರಸ್ ನ 1 ನೇ ಕ್ರಾಸ್ ಬಳಿ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಸ್ಕೂಟರ್ ನಲ್ಲಿ ಬಂದಿದ್ದ ಮೂವರು ವ್ಯಕ್ತಿಗಳ ಪೈಕಿ, ಒಬ್ಬನು ಚೂರಿ ತೋರಿಸಿ, ಬೆದರಿಸಿ, ಕಿಸೆಯಲ್ಲಿದ್ದ ವಿವೋ ಮೊಬೈಲ್ ಅನ್ನು ಬಲವಂತವಾಗಿ ಕಸಿದುಕೊಂಡಿದ್ದಲೇ, ಇನ್ನೊಬ್ಬ ವ್ಯಕ್ತಿ ಪ್ಯಾಂಟಿನ ಕಿಸೆಯಲ್ಲಿದ್ದ 500 ರೂಪಾಯಿಯನ್ನು ಕಸಿದು ಕೊ೦ಡಿದ್ದಾರೆ., ಬಳಿಕ ಮೂವರು ಅಪರಿಚಿತ ವ್ಯಕ್ತಿಗಳು ಕೈಯಿಂದ ಹೊಡೆದು, ನೆಲಕ್ಕೆ ಬೀಳಿಸಿ, ಕಾಲಿನಿಂದ ತುಳಿದು, ಚಾಕುವಿನ ಹಿಡಿಯಿಂದ ಬಲಗೈ ಗೆ ಹೊಡೆದುಸ್ಕೂಟರ್ ನಲ್ಲಿ ಪರಾರಿಯಾಗಿದ್ದಾರೆ.ಉವಾ೯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles