ಬೆಳ್ತ೦ಗಡಿ :ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ನೀಡಿ ಹಣ ತೆಗೆದುಕೊಡುವಂತೆ ಕೇಳಿ 1ಲಕ್ಷ ರೂ. ಕಳೆದುಕೊ೦ಡ ಪ್ರಕರಣ ಬೆಳ್ತ೦ಗಡಿ ನಡೆದಿದೆ.
ಬೆಳ್ತಂಗಡಿ ಮೆಲಂತಬೆಟ್ಟು ನಿವಾಸಿ ವ್ಯಕ್ತಿಯೋವ೯ರು ಬುಧವಾರ ಸಂಜೆ ಸಮಯ, ಬೆಳ್ತಂಗಡಿ ಕಸಬಾ ಗ್ರಾಮದ ಎಸ್ ಬಿಐ ಎಟಿಎಂ ನಿಂದ ಹಣ ತೆಗೆಯಲು ತೆರಳಿದ್ದರು. ಅವರಿಗೆ ಎಟಿಎಂ ಕಾರ್ಡ್ ಬಳಕೆಯ ಬಗ್ಗೆ ತಿಳಿಯದೇ ಇದ್ದುದರಿಂದ, ಅಲ್ಲೇ ಪಕ್ಕದಲ್ಲಿರುವ ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ನೀಡಿ, ಎ.ಟಿ.ಎಂ ಪಿನ್ ನಂಬರ್ ತಿಳಿಸಿ ಹಣ ತೆಗೆದುಕೊಡುವಂತೆ ವಿನಂತಿಸಿದರು. ಅಪರಿಚಿತ ವ್ಯಕ್ತಿಯು ಅವರಿಗೆ 3000 ರೂ. ಹಣವನ್ನು ಎ.ಟಿ.ಎಂ ನಿಂದ ತೆಗೆದು ನೀಡಿದ್ದ. ಮೂರು ದಿನಗಳ ನಂತರ ಅವರ ಖಾತೆಯಿಂದ 1,05,300 ರೂ . ಹಣ ಕಡಿತವಾಗಿರುವ ವಿಚಾರ ತಿಳಿದುಬಂತು. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ, ಅಪರಿಚಿತ ವ್ಯಕ್ತಿ ಅವರ ಎಟಿಎಂ ಕಾರ್ಡ್ ಬದಲಾಯಿಸಿ ನೀಡಿರುವುದು ತಿಳಿದುಬಂದಿದೆ. ಅಪರಿಚಿತ ವ್ಯಕ್ತಿಯು ಅವರ ಎ.ಟಿ.ಎಂ ಕಾರ್ಡ್ ಬದಲಾವಣೆ ಮಾಡಿ, ಬಳಿಕ ಆ ಎಟಿಎಂ ಕಾರ್ಡ್ ಬಳಸಿ 1.05.300 ರೂ. ಕಳ್ಳತನ ಮಾಡಿದ್ದ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
