23.5 C
Karnataka
Thursday, April 3, 2025

ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ಕತ್ತಿಯಿಂದ ಹಲ್ಲೆ!

ಕಡಬ :ಸಣ್ಣ ಮಗು ಮಲಗಿದೆ; ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕಡಬದ ಬಳ್ಪದಲ್ಲಿ ನಡೆದಿದೆ. ಕಡಬ ನಿವಾಸಿ ರಮೇಶ್‌ ಕೆ. ಹಲ್ಲೆಗೊಳಗಾದವರು.ಸುಂದರ ಹೊಸ್ಮಠ ಹಲ್ಲೆ ನಡೆಸಿದ ಆರೋಪಿ.
ರಮೇಶ್‌ ಹೆಂಡತಿ ಮತ್ತು ಸಣ್ಣ ಮಗನೊಂದಿಗೆ ಬಳ್ಪದಲ್ಲಿ ವಾಸವಾಗಿದ್ದು ಮ೦ಗಳವಾರ ಸಂಜೆ ಮನೆಯಲ್ಲಿರುವಾಗ, ಸಂಬಂಧಿಕ ಆರೋಪಿ ಸುಂದರ ಹೊಸ್ಮಠ ಮನೆಗೆ ಬಂದಿದ್ದ. ಮನೆಯಲ್ಲಿ ಕುಳಿತುಕೊಂಡು ಜೋರಾಗಿ ಮಾತನಾಡುತ್ತಿದ್ದಾಗ ಸಣ್ಣ ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ತಿಳಿಸಿದ್ದು ಇದರಿಂದ ಕುಪಿತನಾದ ಆರೋಪಿ ಕತ್ತಿಯಿಂದ ಹಲ್ಲೆ ನಡೆಸಿರುತ್ತಾನೆ. ಹಲ್ಲೆಯಿಂದಾದ ಗಾಯಕ್ಕೆ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವುದಾಗಿ ‌ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles