ಬಂಟ್ವಾಳ :ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಪಡಿಸಿಕೊ೦ಡಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಎ.9ರಂದು ರಾತ್ರಿ, ಕಾರಿಂಜ ದರ್ಖಾಸು ಕಡೆಯಿಂದ, ಬರ್ಕಟ ಕ್ರಾಸ್ ಕಡೆಗೆ ಆಟೋರಿಕ್ಷಾದಲ್ಲಿ ದನವನ್ನು ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಮೂರ್ತಿರವರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ, ಆಟೋರಿಕ್ಷಾವನ್ನು ನಿಲ್ಲಿಸುವಂತೆ ಸೂಚಿಸಿದಾಗ ಅಟೋರಿಕ್ಷಾ ಚಾಲಕನು ನಿಲ್ಲಿಸದೇ, ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗಿರುತ್ತಾನೆ. ಆತನನ್ನು ಬೆನ್ನಟ್ಟಿಕೊಂಡು ಹೋಗಲಾಗಿ, ಅಟೋರಿಕ್ಷಾ ಚಾಲಕನು ರಿಕ್ಷಾವನ್ನು ಸ್ವಲ್ಪ ಮುಂದೆ ಚಲಾಯಿಸಿ, ರಿಕ್ಷಾದಲ್ಲಿದ್ದ ಒಂದು ಜಾನುವಾರನ್ನು ರಿಕ್ಷಾದಿಂದ ಇಳಿಸಿ ಪರಾರಿಯಾಗಿರುತ್ತಾನೆ. ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ, ಆಟೋರಿಕ್ಷಾ ಚಾಲಕ ಮಹಮ್ಮದ್ ಮುಸ್ತಫ ಮತ್ತು ಆಟೋರಿಕ್ಷಾದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಲಿಂಗಪ್ಪ ಎಂಬುದಾಗಿ ತಿಳಿದು ಬ೦ದಿದೆ.ಆರೋಪಿಗಳು ದನವನ್ನು ಯಾವುದೇ ಪರವಾನಿಗೆ ಇಲ್ಲದೆ, ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ದನವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸ್ವಾಧೀನಪಡಿಸಿಕೊಂಡು, ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.