ಬಂಟ್ವಾಳ : ನಿಶ್ಚಿತಾರ್ಥಕ್ಕೆ೦ದು ಪಡೆದುಕೊ೦ಡ ಚಿನ್ನಾಭರಣಗಳನ್ನು ಹಿಂತಿರುಗಿಸದೇ ವಂಚನೆ ಮಾಡಲಾಗಿದೆ ಎ೦ದು ಬಂಟ್ವಾಳ ನಗರ ಠಾಣೆಗೆ ಮಹಿಳೆಯೋವ೯ರುದೂರು ನೀಡಿದ್ದಾರೆ.
ಬಂಟ್ವಾಳ ಬಿ ಮೂಡ ಗ್ರಾಮದ ನಿವಾಸಿ ಸಂಧ್ಯಾ ಎಂಬವರ ದೂರಿನಂತೆ, ಅವರು 23.04.2023 ರಂದು ವಿದೇಶಕ್ಕೆ ತೆರಳಲು ಮಂಗಳೂರು ಏರ್ ಪೋರ್ಟ್ ನಲ್ಲಿದ್ದಾಗ ಸ್ನೇಹಿತೆ ಅಶ್ಚಿನಿ ಎಂಬವರು ಮದುವೆಯಾಗುವ ಹುಡುಗ ಎಂದು ಹೇಳಿ ಪರಿಚಯಿಸಿದ ಶ್ರೀಕಾಂತ್ ಎಂಬಾತನೊಂದಿಗೆ ಬಂದು ತನ್ನ ನಿಶ್ಚಿತಾರ್ಥಕ್ಕಾಗಿ ಚಿನ್ನಾಭರಣಗಳನ್ನು ನೀಡುವಂತೆ ವಿನಂತಿಸಿಕೊಂಡಿದ್ದಾರೆ. ಅದರ೦ತೆ ಅವರ ತಾಯಿಯ ಬಳಿ ತನ್ನ ಚಿನ್ನಾಭರಣಗಳನ್ನು ಕೊಡುವಂತೆ ತಿಳಿಸಿ ವಿದೇಶಕ್ಕೆ ತೆರಳಿರುತ್ತಾರೆ. ಅವರ ತಾಯಿ ಅಶ್ಚಿನಿಗೆ ಚಿನ್ನದ ನಕ್ಲೇಶ್,,1 ಜೊತೆ ವಜ್ರದ ಕಿವಿಯೊಲೆ ,ಚಿನ್ನದ ಕೈ ಬಳೆಗಳು,ಚಿನ್ನದ ಪೆಂಡೆಂಟ್,ಚಿನ್ನದ ರಿಂಗ್ ಹಾಗೂ ಚಿನ್ನದ ಸರ ನೀಡಿರುತ್ತಾರೆ.ಕೆಲ ಸಮಯದ ಬಳಿಕ ಸಂಧ್ಯಾ ಅವರು ಚಿನ್ನಾಭರಣಗಳನ್ನು ಹಿಂತಿರುಗಿಸುವಂತೆ ಅಶ್ಚಿನಿ ಹಾಗೂ ಶ್ರೀಕಾಂತ್ ಎಂಬವರನ್ನು ಕೇಳಿಕೊಂಡಾಗ ಹಿಂತಿರುಗಿಸಿಲ್ಲ. ಬಳಿಕ 26.10.2023 ರಂದು ಚಿನ್ನದ ಕೈ ಬಳೆ,ಚಿನ್ನದ ಪೆಂಡೆಂಟ್ ಹಾಗೂ ಚಿನ್ನದ ರಿಂಗ್ ಹಿಂತಿರುಗಿಸಿರುತ್ತಾರೆ. ಉಳಿದ ಚಿನ್ನಾಭರಣಗಳನ್ನು ಈವರೆಗೆ ಹಿಂತಿರುಗಿಸದೇ ವಂಚಿಸಿರುತ್ತಾರೆ ಎಂಬುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ