ಬಂಟ್ವಾಳ : ಎಂ.ಆರ್.ಪಿ.ಎಲ್ ಸಂಸ್ಥೆಯಿಂದ ಡಾಮಾರು ಲೋಡ್ ಮಾಡಿಕೊಂಡು ಬಂದ ಟ್ಯಾಂಕರ್‌ಗಳಿಂದ, ಅಕ್ರಮವಾಗಿ (ಕಳ್ಳತನದ ಮೂಲಕ) ಬೇರೆ ಟ್ಯಾಂಕರ್‌ಗಳಿಗೆ ಡಾಮಾರ್‌ನ್ನು ವರ್ಗಾಯಿಸುತ್ತಿದ್ದಾಗ ಜಾಲವನ್ನು ಬೇಧಿಸಿರುವ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು 10 ಆರೋಪಿಗಳನ್ನು ಬ೦ಧಿಸಿದ್ದಾರೆ. ಸ್ಥಳದಲ್ಲಿದ್ದ 6 ಟ್ಯಾಂಕರ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಡಿ.8 ರಂದು ರಾತ್ರಿ ಬಂಟ್ವಾಳ ತಾಲೂಕು ಕಡೇಶ್ವಾಲ್ಯ ಗ್ರಾಮದ ಅಮೈ ಎಂಬಲ್ಲಿ, ಎಂ.ಆರ್.ಪಿ.ಎಲ್ ಸಂಸ್ಥೆಯಿಂದ ಡಾಮಾರು ಲೋಡ್ ಮಾಡಿಕೊಂಡು ಬಂದ ಟ್ಯಾಂಕರ್‌ಗಳಿಂದ, ಅಕ್ರಮವಾಗಿ (ಕಳ್ಳತನದ ಮೂಲಕ) ಬೇರೆ ಟ್ಯಾಂಕರ್‌ಗಳಿಗೆ ಡಾಮಾರ್‌ನ್ನು ವರ್ಗಾಯಿಸುತ್ತಿದ್ದಾಗ, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ್.ಟಿ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದು, ವಿಚಾರಿಸಿದಾಗ ಉಡುಪಿಯ ವಿಜಯಕುಮಾರ್ ಶೆಟ್ಟಿ ಎಂಬಾತನ ಸೂಚನೆಯಂತೆ, ಬಂಟ್ವಾಳ ಕಡೇಶ್ವಾಲ್ಯ ಗ್ರಾಮದ ಸುಧಾಕರ ಶೆಟ್ಟಿ@ಸುಧಾಕರ ಕೊಟ್ಟಾರಿ ಎಂಬರೊಂದಿಗೆ ಸೇರಿ ಈ ಕೃತ್ಯ ನಡೆಯುತ್ತಿರುವುದು ಬೆಳಕಿಗೆ ಬಂದಿರುತ್ತದೆ.
ಮುಂದಿನ ಕಾನೂನುಕ್ರಮಕ್ಕಾಗಿ ಸ್ಥಳದಲ್ಲಿದ್ದ 6 ಟ್ಯಾಂಕರ್ ಲಾರಿಗಳನ್ನು, ಡಾಮಾರ್ ಕಳ್ಳತನ ಮಾಡಲು ಉಪಯೋಗಿಸಿದ ತೂಕ ಮಾಪನ, ಡಾಮಾರ್ ಬಿಸಿಮಾಡಲು ಉಪಯೋಗಿಸಿದ ಗ್ಯಾಸ್ ಸಿಲಿಂಡರ್, ಡಾಮಾರ್ ತುಂಬಿಸಲು ಬಳಸಿರುವ ಕಬ್ಬಿಣದ ಟ್ಯಾಂಕ್
ಆರೋಪಿಗಳ ವಶದಲ್ಲಿದ್ದ 9 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿಗಳಾದ ವಿಜಯ ಕುಮಾರ್ ಶೆಟ್ಟಿ. ಸುಧಾಕರ ಶೆಟ್ಟಿ @ಸುಧಾಕರ ,ಮಹಮ್ಮದ್ ಇಮ್ರಾನ್ , ಅಶ್ರಪ್.ಎಂ , ವಿರೇಂದ್ರ.ಎಸ್.ಆರ್, ಮಾದಸ್ವಾಮಿ,ಪ್ರಭಾಕರನ್, ನವೀನ್ ಕುಮಾರ್,
ಮಹಮ್ಮದ್ ನಿಸಾರ್ ಹಾಗೂ ಮಹಮ್ಮದ್ ಸಿಹಾಬುದ್ದೀನ್ ಎಂಬವರುಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೆಟ್ರೋಲಿಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.