ಸುಳ್ಯ : ಮದ್ಯವ್ಯಸನಿ ಮಗನೋವ೯ ತನ್ನ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಸುಳ್ಯ ಅರಂತೋಡು ಗ್ರಾಮದಲ್ಲಿ ನಡೆದಿದೆ.
ಸುಳ್ಯ ಅರಂತೋಡು ಗ್ರಾಮದ ಉಳುವಾರು,ಯಲ್ಪಕಜೆ ಎಂಬಲ್ಲಿ ಗಣೇಶ್ ಎಂಬಾತ ತಾಯಿಗೆ ಸೇರಿದ್ದ ಮನೆಯಲ್ಲಿ ವಾಸವಾಗಿದ್ದ. ಗಣೇಶ್ ವಿಪರೀತ ಮದ್ಯ ಸೇವನೆ ಮಾಡುವ ಚಟವುಳ್ಳ ವ್ಯಕ್ತಿಯಾಗಿದ್ದು, ತ೦ದೆ ಹಾಗೂ ತಾಯಿಗೆ ಕಿರುಕುಳ ನೀಡುತ್ತಿದ್ದು, ಮತ್ತು ಅವರನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕುತ್ತಿದ್ದ. ಇದರಿ೦ದ ಬೇಸೆತ್ತು ಅವರ ಸೊಸೆ ಮನೆಯಾದ ಸುಳ್ಯಕ್ಕೆ ಬಂದು ವಾಸವಾಗಿದ್ದರು. ರವಿವಾರ ಮನೆಯ ಪಕ್ಕದ ಸಂಬಂಧಿಕರು ಅವರಿಗೆ ಪೋನ್ ಮಾಡಿ ಗಣೇಶನು ಮನೆಗೆ ಬೆಂಕಿ ಹಚ್ಚಿರುವುದಾಗಿ ತಿಳಿಸಿದ್ದರು ಅರಂತೋಡಿಗೆ ಬ೦ದು ನೋಡಿದಾಗ ಮನೆಯು ಸಂಪೂರ್ಣವಾಗಿ ಹತ್ತಿ ಉರಿದಿರುವುದು ಕಂಡು ಬಂದಿರುತ್ತದೆ . ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ
