ಮ೦ಗಳೂರು:ಬೆಂಗಳೂರುನಲ್ಲಿ ಜಾಗ ಕೊಡಿಸುವುದಾಗಿ ನಂಬಿಸಿ 40 ಲಕ್ಷ ರೂ. ವ೦ಚನೆ ಮಾಡಿರುವ ಬಗ್ಗೆ ಮ೦ಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರಿಗೆ ಬೆಂಗಳೂರು ಫ್ರೇಜರ್ ಟೌನ್ ನ ಎ.ಕೆ ಕಾಲೊನಿ ನಿವಾಸಿ ಸೆಲ್ವಕುಮಾರ್ ಎಂಬಾತನು ಬೆಂಗಳೂರು ದಕ್ಷಿಣ ತಾಲೂಕಿನ ಜೀವನಭೀಮನಗರದಲ್ಲಿ 2.20 ಎಕ್ರೆ ಜಾಗವನ್ನು ಕೊಡಿಸುವುದಾಗಿ ಹೇಳಿ ನಂಬಿಸಿದ್ದ. ಆರೋಪಿಯ ಮಾತನ್ನು ನಂಬಿದ ದೂರುದಾರರು ಆ.23 ರಂದು ಆಸ್ತಿ ಖರೀದಿಸುವ ಬಗ್ಗೆ 20 ಲಕ್ಷ ರೂ.ಮೊತ್ತದ ಚೆಕ್ ಮತ್ತು20 ಲಕ್ಷ ರೂ.ನಗದು ಹೀಗೆ ಒಟ್ಟು 40 ಲಕ್ಷ ರೂ. ಹಣವನ್ನು ಮುಂಗಡವಾಗಿ ಆರೋಪಿಗೆ ನೀಡಿದ್ದರು.ಈ ಬಗ್ಗೆ ಒಪ್ಪಂದ ಪತ್ರವನ್ನು ಮಾಡಿ ಕೊಂಡಿರುತ್ತಾರೆ. ನಂತರ ದೂರುದಾರರಿಗೆ ಆರೋಪಿಯು ಜಾಗವನ್ನು ಕೊಡಿಸಿರಲಿಲ್ಲ.ಹಣವನ್ನೂವಾಪಾಸ್ಸು ನೀಡಿರಲಿಲ್ಲ.
ದೂರುದಾರರು ತಾನು ನೀಡಿದ ಹಣವನ್ನು ವಾಪಾಸು ನೀಡುವಂತೆ ಕೇಳಿದಾಗ, ಆರೋಪಿಯು 40 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದ.
ಈಚೆಕ್ ನ್ನು ದೂರುದಾರರು ಬ್ಯಾಂಕ್ ನಲ್ಲಿ ನಗದೀಕರಿಸಲು ನೀಡಿದಾಗ ಚೆಕ್ ಅಮಾನ್ಯಗೊಂಡಿರುವುದಾಗಿ ಬ್ಯಾಂಕ್ ನಲ್ಲಿ ತಿಳಿಸಿದ್ದಾರೆ.ಆರೋಪಿಯು ಬೆಂಗಳೂರಿನಲ್ಲಿ ಜಾಗ ಕೊಡಿಸುವುದಾಗಿ 40 ಲಕ್ಷ ರೂ. ಪಡೆದುಕೊಂಡು ನಂಬಿಸಿ ಮೋಸ ಮಾಡಿರುತ್ತಾರೆ ಎ೦ದು ದೂರುದಾರರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.