ಮಂಗಳೂರು: 2024-25ನೇ ಸಾಲಿನ ತೋಟಗಾರಿಕೆ ಬೆಳೆ ಬೆಳೆದ ರೈತರ ಹವಾಮಾನ ವೈಪರಿತ್ಯದಿಂದ ಬೆಳೆ ನಷ್ಟ ಸಂಭವಿಸಿದರೆ, ನಷ್ಟ ಪರಿಹಾರವನ್ನು ನೀಡಲು ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಸರಕಾರ ಜಾರಿಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿದೆ. ಬೆಳೆಸಾಲ ಪಡೆದ ರೈತರು ಬೆಳೆಸಾಲ ಹೊಂದಿರುವ ಬ್ಯಾಂಕ್‍ನಲ್ಲಿ ಹಾಗೂ ಬೆಳೆಸಾಲ ಹೊಂದಿಲ್ಲದ ರೈತರು ತಮ್ಮ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್‍ಗಳಲ್ಲಿ ನೋಂದಾವಣಿಮಾಡಬೇಕು. ಹಾಗೂ ಸಾಮಾನ್ಯ ಸೇವಾ ಕೇಂದ್ರ (ಅSಅ) ಮತ್ತು ಗ್ರಾಮ ಒನ್ ಮೂಲಕವೂ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆ ಅಡಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಕ್ರಮವಾಗಿ ರೂ. 6400/- ಹಾಗೂ ರೂ. 2350/- ಆಗಿದೆ. ಯೋಜನೆಗೆ ನೋಂದಾಯಿಸಲು ಜುಲೈ 31 ಕೊನೆಯ ದಿನ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದರಿ ಯೋಜನೆಯ ಅನುμÁ್ಠನಕ್ಕೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಾಗಿ ಪ್ರಸಕ್ತ ಸಾಲಿಗೆ ಟಾಟಾ ಎಐಜಿ ಸಂಸ್ಥೆಯು ಆಯ್ಕೆಯಾಗಿದೆ. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರತಿನಿಧಿ ಅಥವಾ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಮಂಜುನಾಥ ಡಿ. ಮೊಬೈಲ್ ಸಂಖ್ಯೆ: 9448999226, ಮಂಗಳೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರವೀಣ ಕೆ ಮೊಬೈಲ್ ಸಂಖ್ಯೆ: 9449258204, ಬಂಟ್ವಾಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೋ. ಪ್ರದೀಪ್ ಡಿಸೋಜಾ ಮೊಬೈಲ್ ಸಂಖ್ಯೆ: 9448206393, ಪುತ್ತೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರೇಖಾ ಎ. ಮೊಬೈಲ್ ಸಂಖ್ಯೆ: 9731854527, ಸುಳ್ಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಸುಹಾನ ಪಿ.ಕೆ. ಮೊಬೈಲ್ ಸಂಖ್ಯೆ: 9880993238, ಬೆಳ್ತಂಗಡಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಚಂದ್ರಶೇಖರ ಕೆ.ಎಸ್. ಮೊಬೈಲ್ ಸಂಖ್ಯೆ: 9448336863 ಹಾಗೂ ಟಾಟಾ ಎಐಜಿ ಸಂಸ್ಥೆಯ ಪ್ರತಿನಿಧಿ ಶುಭಂ ಮೊಬೈಲ್ ಸಂಖ್ಯೆ: 9131962255 ಸಂಪರ್ಕಿಸುವಂತೆ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.