ಮ೦ಗಳೂರು: ವಾಟ್ಸ್ ಆಪ್ ಮುಖಾಂತರ ಯಾರೋ ಅಪರಿಚಿತ ವ್ಯಕ್ತಿಗಳು ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡು ಅತ್ಯಂತ ಆತ್ಮೀಯರಾಗಿ ಮಾತನಾಡಿಕೊಂಡು ತನ್ನ ಬ್ಯಾಂಕ್ ಖಾತೆಯಿ೦ದ ಆನ್ ಲೈನ್ ಮುಖಾಂತರ ಒಟ್ಟು 72,86,916 ರೂ.ಗಳನ್ನು ವರ್ಗಾಯಿಸಿಕೊಂಡು ವ೦ಚಿಸಿರುತ್ತಾರೆ ಎ೦ದು ವ್ಯಕ್ತಿಯೋವ೯ರು ಮ೦ಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರರಿಗೆ ವಾಟ್ಸ್ ಆಪ್ ಮುಖಾಂತರ ಯಾರೋ ಅಪರಿಚಿತ ವ್ಯಕ್ತಿಗಳು ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡು ಅತ್ಯಂತ ಆತ್ಮೀಯರಾಗಿ ಮಾತನಾಡಿಕೊಂಡಿರುತ್ತಾರೆ.ನಂತರದ ದಿನಗಳಲ್ಲಿ ದೂರುದಾರರು ಸದ್ರಿ ಅಪರಿಚಿತ ವ್ಯಕ್ತಿಗಳೊಂದಿಗೆ ವಾಟ್ಸ್ ಆಪ್ ಮುಖಾಂತರ ನಿರಂತರವಾಗಿ ಸಂಪರ್ಕದಲ್ಲಿದ್ದರು.ಈ ಅಪರಿಚಿತ ವ್ಯಕ್ತಿಗಳು ದೂರುದಾರರಿಗೆ ಲಾಟರಿ ಹಣ ಬಂದಿರುವುದಾಗಿ ತಿಳಿಸಿ ಸದ್ರಿ ಹಣವನ್ನು ದೂರುದಾರರ ಖಾತೆಗೆ ಜಮಾ ಮಾಡುವುದಾಗಿಯೂ ಹಾಗೂ ಹಣವನ್ನು ಪಾವತಿ ಮಾಡಲು ಅಪರಿಚಿತ ವ್ಯಕ್ತಿಯ ದೂರವಾಣಿ ಸಂಖ್ಯೆ-9038910423ನೇದನ್ನು ದೂರುದಾರರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುವಂತೆ ತಿಳಿಸಿದ್ದರು. ಅದರ೦ತೆ ದೂರವಾಣಿ ಸಂಖ್ಯೆಯನ್ನು ದೂರುದಾರರು ಮ೦ಗಳೂರಿನ ಆರ್ಯ ಸಮಾಜ ರೋಡ್ ಮತ್ತು ಬಿಜೈಯಲ್ಲಿರುವ ಬ್ಯಾಂಕ್ ಗಳಲ್ಲಿರುವ ತನ್ನ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿದ್ದರು.
ಇದಾದ ನಂತರ ದೂರುದಾರರಿಗೆ ನಿವೃತ್ತಿಯಿಂದ ಬರಬೇಕಾದ ಹಣ ಬ್ಯಾಂಕ್ ಖಾತೆಗಳಿಗೆ ದಿನಾಂಕ 26-10-2023 ರಂದು 50,55,118/- ರೂಗಳು ಮತ್ತು ದಿನಾಂಕ 31-10-2023 ರಂದು 22,31,798/- ರೂಗಳು ಬಂದಿರುತ್ತದೆ.ನಂತರ ಅಪರಿಚಿತ ವ್ಯಕ್ತಿಯು ದೂರುದಾರರ ಗಮನಕ್ಕೆ ಬಾರದೆ ಒಟ್ಟು 72,86,916 /- ರೂಗಳನ್ನು ದಿನಾಂಕ 26-10-2023 ರಿಂದ 02-11-2023 ರವರೆಗೆ ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡಿರುತ್ತಾರೆ .ಈ ವಿಷಯವು ದೂರುದಾರರು ಬ್ಯಾಂಕ್ ನಲ್ಲಿ ಹೋಗಿ ವಿಚಾರಿಸಿದಾಗ ಅವರ ಗಮನಕ್ಕೆ ಬಂದಿರುತ್ತದೆ.ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಆನ್ ಲೈನ್ ಮುಖಾಂತರ ಒಟ್ಟು 72,86,916/-ರೂಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುತ್ತಾರೆ ಎ೦ದು ದೂರುದಾರರು ಮ೦ಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.