ಮ೦ಗಳೂರು: ವ್ಯಕ್ತಿಯೋವ೯ರಿಗೆ ವಾಟ್ಸಾಪ್ ನಲ್ಲಿ ಟಾಸ್ಕ್ ನೀಡಿ 21.51 ಲಕ್ಷ ರೂ.ಮೋಸದಿಂದ ವರ್ಗಾಯಿಸಿಕೊಂಡಿರುವ ಬಗ್ಗೆ ಮ೦ಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರ ವಾಟ್ಸಾಪ್ ನಂಬರ್ ಗೆ ದಿನಾಂಕ 4-11-2023 ರಂದು +84334590184 ನಂಬ್ರದಿಂದ ಮೇಸೆಜ್ ಬಂದಿತ್ತು. ಸದ್ರಿ ಮೇಸೆಜ್ ನಲ್ಲಿದ್ದ https://t.me/khkf021 ಎಂಬ ಲಿಂಕ್ ನ್ನು ಓಪನ್ ಮಾಡಿದಾಗ ಟೆಲಿಗ್ರಾಂ ಆಪ್ ನಲ್ಲಿ ಒಂದು ಗ್ರೂಪ್ ಗೆ ಅವರನ್ನು ಸೇರಿಸಲಾಗಿತ್ತು. ನಂತರ ದೂರುದಾರರಿಗೆ ಸ್ಟಾರ್ ರೇಟಿಂಗ್ ಎಂಬ ಟಾಸ್ಕ್ ನ್ನು ನೀಡಲಾಗಿದ್ದು, ಅದಕ್ಕೆ ದೂರುದಾರರು ಮೊದಲು 5,000 ರೂ. ಹಣವನ್ನು ಹಾಕಿದ್ದರು. ನಂತರ ದೂರುದಾರರ ಖಾತೆಗೆ 6,500 ರೂ ಹಣವನ್ನು ಜಮಾ ಮಾಡಿರುತ್ತಾರೆ. ನಂತರ ಗ್ರೂಪ್ ಮರ್ಚೆಂಟ್ ಟಾಸ್ಕ್ ಎನ್ನುವ ಮಿಷನ್ ನ್ನು ಪೂರ್ಣಗೊಳಿಸಬೇಕು .ಇದಕ್ಕೆ ಹಣ ಸಂದಾಯ ಮಾಡಬೇಕೆಂದು ಹೇಳಿ ದೂರುದಾರರನ್ನು ನಂಬಿಸಿ ಅವರ ಖಾತೆಯಿಂದ ಹಂತ-ಹಂತವಾಗಿ ದಿನಾಂಕ 4-11-2023 ರಿಂದ 7-11-2023 ರವರೆಗೆ ಒಟ್ಟು 21,51,000 ರೂ. ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುತ್ತಾರೆ ಎಒದು ದೂರಿನಲ್ಲಿ ವಿವರಿಸಲಾಗಿದೆ.