ಮ೦ಗಳೂರು: ಆನ್ಲೈನ್ ಮೂಲಕ ಪಾರ್ಟ್ ಟೈಮ್ ಉದ್ಯೋಗ ಒದಗಿಸುವುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಗಳು ಒಟ್ಟು 15,04,838 ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ ಬಗ್ಗೆ ವ್ಯಕ್ತಿಯೋವ೯ರು ಮ೦ಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರರು ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಿಕೊಂಡಿದ್ದು 14/11/2023 ರಂದು ಅವರ ಟೆಲಿಗ್ರಾಂ ಖಾತೆಗೆ ರಂಜಿತ್ ಯಾದವ್ ಎಂಬ ಹೆಸರಿನ ಟೆಲಿಗ್ರಾಂ ಖಾತೆಯಿಂದ ಪಾರ್ಟ್ ಟೈಮ್ ಜಾಬ್ ಬಗ್ಗೆ ಒಂದು ಸಂದೇಶ ಬಂದಿದೆ.ಅದರಂತೆ ದೂರುದಾರರು ಸದ್ರಿ ಖಾತೆದಾರರಿಗೆ ಸಂದೇಶ ಕಳುಹಿಸಿ ಪಾರ್ಟ್ ಟೈಮ್ ಉದ್ಯೋಗದ ಬಗ್ಗೆ ಮಾಹಿತಿ ವಿಚಾರಿಸಿದ್ದರು.ಇದು ಆನ್ಲೈನ್ ಮೂಲಕ ಎಲೆಕ್ಟ್ರಾನಿಕ್, ಗೃಹೋಪಯೋಗಿ ಹಾಗು ಇತರ ವಸ್ತುಗಳಿಗೆ ರೇಟಿಂಗ್ ನೀಡುವ ಉದ್ಯೋಗ ಆಗಿರುವುದಾಗಿಯೂ moz2003.com (Discount Goods) ಎಂಬ ವೆಬ್ಸೈಟ್ ನಲ್ಲಿ ಖಾತೆಯನ್ನು ತೆರೆದು ಅದರಲ್ಲಿ ಜಾಹಿರಾತು ಹಾಕಿರುವ ಎಲೆಕ್ಟ್ರಾನಿಕ್, ಗೃಹೋಪಯೋಗಿ ಹಾಗು ಇತರ ವಸ್ತುಗಳಿಗೆ ನೋಡಿ ರೇಟಿಂಗ್ ಹಾಕಿ ಕಮೀಷನ್ ಹಣ ಪಡೆಯಬಹುದಾಗಿದೆ ಎ೦ದು ತಿಳಿಸಿದ್ದರು.
ಅದರಂತೆ ಅದೇ ದಿನ ಟೆಲಿಗ್ರಾಂ ಮೂಲಕ ಅವರು ಕಳುಹಿಸಿದ moz2003.com (Discount Goods) ವೆಬ್ ಸೈಟ್ ಲಿಂಕ್ ನಲ್ಲಿ ದೂರುದಾರರ ಮೊಬೈಲ್ ನಂಬ್ರ ನಮೂದಿಸಿ ಖಾತೆಯನ್ನು ತೆರೆದಿರುತ್ತಾರೆ. ನಂತರ ಸದ್ರಿ ಆಪ್ ನಲ್ಲಿ ಟ್ರಯಲ್ ಜಾಬ್ ನೀಡಿದ್ದು ಅದರಂತೆ ದೂರುದಾರರುಸದ್ರಿ ಆಪ್ ನಲ್ಲಿ ಜಾಹೀರಾತು ಬರುವ ವಸ್ತುಗಳನ್ನು ನೋಡಿ ಅದಕ್ಕೆ ರೇಟಿಂಗ್ ನೀಡಿರುತ್ತಾರೆ. ಈ ಬಗ್ಗೆ ಆರಂಭದಲ್ಲಿ 860 ರೂ. ಕಮಿಷನ್ ನೀಡಿರುತ್ತಾರೆ. ನಂತರ ಪಾರ್ಟ್ ಟೈಮ್ ಜಾಬ್ ಮುಂದುವರಿಸಲು 10,000 ರೂ.ಪಾವತಿಸುವಂತೆ ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿದ್ದು, ಅದರಂತೆ ದೂರುದಾರರು ದಿನಾಂಕ: 16/11/2023 ರಂದು ತನ್ನ ಬ್ಯಾ೦ಕ್ ಖಾತೆಯಿ೦ದ ಅಪರಿಚಿತ ವ್ಯಕ್ತಿಗಳು
ಕಳುಹಿಸಿದ ಬ್ಯಾಂಕ್ ಖಾತೆಗೆ 10,000 ರೂ. ವರ್ಗಾಯಿಸಿರುತ್ತಾರೆ. ದೂರುದಾರರು ಪಾವತಿಸಿದ ಮೊತ್ತಕ್ಕೆ 14,900 ರೂ. ಮರುಪಾವತಿ ಮಾಡಿರುತ್ತಾರೆ. ನಂತರ ದೂರುದಾರರು ವೆಬ್ ಸೈಟ್ ನಲ್ಲಿ ತನ್ನ ಖಾತೆಯನ್ನು ಪರಿಶೀಲಿಸಿದಲ್ಲಿ ಪಾವತಿಸಿದ ಹಣಕ್ಕೆ ಕಮೀಷನ್ ಸೇರಿಸಿ ಹೆಚ್ಚಿನ ಹಣ ಇರುವುದು ಕಂಡು ಬಂದಿತ್ತು. ದೂರುದಾರರು ಹೆಚ್ಚಿನ ಹಣ ದೊರಕಬಹುದೆಂದು ನಂಬಿ ಅವರು ತಿಳಿಸಿದಂತೆ ದಿನಾಂಕ: 17/11/2023 ರಿಂದ 19/11/2023 ರ ಮಧ್ಯಾವಧಿಯಲ್ಲಿ ಅವರು ಕಳುಹಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ತನ್ನ ಬ್ಯಾಂಕ್ ಖಾತೆಯಿಂದ ಒಟ್ಟು ರೂ 11,30,510/- ಹಾಗೂ ತನ್ನ ತಂದೆಯ ಖಾತೆಯಿ೦ದ 3,74,328 ರೂ.ಗಳನ್ನು ಬ್ಯಾಂಕ್ ಖಾತೆಗಳಿಗೆ ಮತ್ತು ಯುಪಿಐ ಐಡಿ ಗೆ ವರ್ಗಾಯಿಸಿರುತ್ತಾರೆ. ಬಳಿಕ ದೂರುದಾರರು ಹೂಡಿಕೆ ಮಾಡಿದ ಹಣವನ್ನು ವಿದ್ ಡ್ರಾ ಮಾಡಲು ಪ್ರಯತ್ನಿಸಿದಾಗಪುನಃ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು ಆ ಸಮಯ ಮೋಸ ಹೋಗಿರುವುದು ಮನವರಿಕೆಯಾಗಿರುತ್ತದೆ.