ಮ೦ಗಳೂರು : ಹೋಂ ಸ್ಟೇ ರೇಟಿಂಗ್ ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ 27.56 ಲಕ್ಷ ರೂ. ವ೦ಚನೆ ಮಾಡಿರುವ ಬಗ್ಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರ ಟೆಲಿಗ್ರಾಮ್ ನಂಬ್ರ ಗೆ ದಿನಾಂಕ 19-06-2023 ರಂದು ಅಪರಿಚಿತ Aditi MMT guru ಎಂಬ ಗ್ರೂಪ್ ನಲ್ಲಿ ಹೋಟೆಲ್ ಮತ್ತು ಹೋಂ ಸ್ಟೇ ರೇಟಿಂಗ್ ನೀಡಿ ಪಾರ್ಟ್ ಟೈಮ್ ಜಾಬ್ ನೀಡುವುದರ ಬಗ್ಗೆ ಹಾಗೂ ಟಾಸ್ಕ್ ಕಂಪ್ಲೀಟ್ ಮಾಡಿದರೆ ಹಣ ಗಳಿಸಬಹುದು ಎಂಬ ಬಗ್ಗೆ ಮೆಸೇಜ್ ಬಂದಿರುತ್ತದೆ. ನಂತರ ದೂರುದಾರರನ್ನು ಟೆಲಿಗ್ರಾಂ ಆಪ್ ಮೂಲಕ 30 ಟಾಸ್ಕ್ ಕಂಪ್ಲೀಟ್ ಮಾಡಿದಂತೆ 900ರೂ. ಹಣವನ್ನು ಲಾಭಾಂಶವೆಂದು ನೀಡಿದ್ದು ಅದೇ ದಿನ 11,000ರೂ.- ಡೆಪಾಸಿಟ್ ಮಾಡಿಸಿ ತದನಂತರ ಹಾಗೂ 20,000ರೂ.- ಹಾಗೂ 70,000 ರೂ.ಹಣವನ್ನು ಲಾಭಾಂಶವೆಂದು ನೀಡಿರುತ್ತಾರೆ. ನಂತರದಲ್ಲಿ ಈ ರೀತಿ ಹಣ ಹೂಡಿಕೆ ಮಾಡಿದ್ದಲ್ಲಿ ಲಾಭಾಂಶ ನೀಡುವುದಾಗಿ ತಿಳಿಸಿ ದೂರುದಾರರಿಂದ ಹಂತ ಹಂತವಾಗಿ ಒಟ್ಟು 27,56,129/- ಹಣವನ್ನು IMPS ಮುಖೇನಾ ಆರೋಪಿತರು ಬೇರೆ ಬೇರೆ ಬ್ಯಾಂಕ್ ಅಕೌಂಟ್ ವರ್ಗಾಯಿಸಿಕೊಂಡಿರುತ್ತಾರೆ. ಹೀಗೆ ದಿನಾಂಕ 19-06-2023 ರಿಂದ 26-08-2023 ರವರೆಗೆ ಪಿರ್ಯಾದಿದಾರರನ್ನು ನಂಬಿಸಿ ಮೊಸ ವಂಚನೆಯಿಂದ ಹಣ ವರ್ಗಾವಣೆ ಮಾಡಿಕೊಂಡಿರುತ್ತಾರೆ.ದೂರುದಾರರು ಈವರೆಗೆ ಆರೋಪಿತನು ಹಣವನ್ನು ಹಿಂತಿರುಗಿಸಬಹುದು ಕಾದು ನಾನು ಮೋಸ ಹೋಗಿರುವುದನ್ನು ತಿಳಿದು ಪೊಲೀಸ್ ಠಾಣೆಗೆ ನೀಡಿರುತ್ತಾರೆ.