ಮ೦ಗಳೂರು: ಕರ್ನಾಟಕದಲ್ಲಿ ನಡೆದ ಬಾಂಬ್ ದಾಳಿ ,ಭಯೋತ್ಪಾದಕ ಕೃತ್ಯಗಳನ್ನು ಖಂಡಿಸಿ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿಯಿ೦ದ ತುಮಕೂರಿನಲ್ಲಿ ನಡೆಯಲಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಜರಂಗದಳ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕರವರನ್ನು ಕುಣಿಗಲ್ ನಲ್ಲಿ ಪೊಲೀಸರು ಬಂಧಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಡೆದಿದ್ದು ಸರಕಾರದ ಈ ನಡೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎ೦ದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಕಾಂಗ್ರೆಸ್ ಸರಕಾರವು ಪೊಲೀಸ್ ಇಲಾಖೆಯ ಮುಖಾಂತರ ದೇಶಭಕ್ತ ಹಿಂದೂ ಮುಖಂಡರನ್ನು ಬಂಧಿಸಿ, ಪರೋಕ್ಷವಾಗಿ ದೇಶದ್ರೋಹಿಗಳ ಪರ ನಿಲ್ಲುವಂತಹ ಕೆಲಸ ಮಾಡುತ್ತಿದೆ. ಇಷ್ಟೇ ಅಲ್ಲದೇ ಕಲಬುರ್ಗಿಯಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರನ್ನು ಜಿಲ್ಲೆ ಪ್ರವೇಶಿಸದಂತೆ ತೆಡೆದಿದ್ದು, ಆ ನಂತರ ಈ ಪ್ರಕರಣದಲ್ಲಿ ಹೈಕೋರ್ಟಿನಿಂದ ಉಗಿಸಿಕೊಂಡರೂ ಬುದ್ದಿ ಕಲಿತುಕೊಳ್ಳದ ಕರ್ನಾಟಕದ ಕಾಂಗ್ರೇಸ್ ಸರಕಾರ ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವ ಮೂಲಕ ಸಂವಿಧಾನ ವಿರೋಧಿ ಸರಕಾರವಾಗಿದೆ. ರಾಜ್ಯ ಕಾಂಗ್ರೇಸ್ ಸರಕಾರದ ಈ ನಡೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎ೦ದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ..