17.5 C
Karnataka
Friday, November 22, 2024

ಇಂದಿರಾ ಗಾಂಧಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣಕತ೯ರು :ಬಿ.ರಮಾನಾಥ ರೈ

ಮಂಗಳೂರು: ಇಂದಿರಾ ಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣ, ಭೂ ಮಸೂದೆ ಕಾಯ್ದೆ ಹಾಗೂ ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ರವಿವಾರ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಬಳಿಕ ಅವರು ಮಾತನಾಡಿದರು.ಇಂದಿರಾ ಗಾಂಧಿ ಅವರು ದೇಶದ ಏಕತೆಗಾಗಿ ಬಲಿದಾನಗೈದ ಮಹಿಳೆ. ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಗೊಳಿಸಬೇಕಾದ ಅನಿವಾರ್ಯ ಎದುರಾಯಿತು. ಆದರೆ ಇದರಿಂದ ಬಡವರಿಗೆ ಅನುಕೂಲವಾಗಿದೆ ಹೊರತು ಅನಾನುಕೂಲವಾಗಿಲ್ಲ.ಬಡತನ ನಿರ್ಮೂಲನೆ ಕಾರ್ಯಕ್ರಮದ ಮೂಲಕ ಜನರು ಆರ್ಥಿಕವಾಗಿ ಮೇಲಕ್ಕೆತ್ತುವ ಕೆಲಸ ಮಾಡಿದ್ದರು. ಬಡವರಿಗೆ ಯೋಗ್ಯವಾಗುವ ಯೋಜನೆಗಳನ್ನು ಜಾರಿಗೊಳಿಸಿದ ನಂತರ ತುರ್ತುಪರಿಸ್ಥಿತಿಯನ್ನು ಸ್ವತಃ ಹಿಂಪಡೆದರು. ಅವರು ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದ‌ ಜನರಿಗೆ ಸ್ವಾಭಿಮಾನದ ಬದುಕನ್ನು ಕಲ್ಪಿಸಿದರು. 20 ಅಂಶದ ಆರ್ಥಿಕ ಕಾರ್ಯಕ್ರಮದ ಹೆಚ್ಚಿನ ಫಲಾನುಭವಿಗಳು ದ.ಕ.ಜಿಲ್ಲೆಯಲ್ಲಿದ್ದಾರೆ ಎಂದು ನೆನಪಿಸಿದರು.

ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್, ಸಂತೋಷ್ ಕುಮಾರ್ ಶೆಟ್ಟಿ, ಲುಕ್ಮಾನ್ ಬಂಟ್ವಾಳ್, ಜೆ.ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ದಾಸ್, ಬಿ.ಎಂ ಅಬ್ಬಾಸ್ ಅಲಿ, ನೀರಜ್ ಚಂದ್ರ ಪಾಲ್, ಕೆ.ಹರಿನಾಥ್, ಶುಭೋದಯ ಆಳ್ವ, ಮಂಜುಳಾ ನಾಯಕ್, ಚೇತನ್ ಬೆಂಗ್ರೆ, ಮುಹಮ್ಮದ್ ಕುಂಜತ್ತಬೈಲ್, ಟಿ.ಕೆ ಸುಧೀರ್, ವಿಕಾಸ್ ಶೆಟ್ಟಿ, ಶಂಸುದ್ದೀನ್ ಬಂದರ್, ಲಕ್ಷ್ಮೀ ನಾಯರ್, ಪದ್ಮನಾಭ ಅಮೀನ್, ಹೈದರ್ ಬೋಳಾರ್, ದಿನೇಶ್ ಕುಂಪಾಲ, ಗಿರೀಶ್ ಶೆಟ್ಟಿ, ಚೇತನ್ ಕುಮಾರ್, ಆಸೀಫ್ ಬೆಂಗ್ರೆ, ವೆಂಕಪ್ಪ ಪೂಜಾರಿ, ಸೌಹಾನ್ ಎಸ್.ಕೆ, ಭಾಸ್ಕರ್ ರಾವ್, ಯೋಗೀಶ್ ನಾಯಕ್, ದಿನೇಶ್ ಪಾಂಡೇಶ್ವರ, ರಫೀಕ್ ಕಣ್ಣೂರ್, ನೀತ್ ಶರಣ್, ಸಲೀಂ ಕುದ್ರೋಳಿ ಉಪಸ್ಥಿತರಿದ್ದರು.ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಸೇವಾದಳ ಜಿಲ್ಲಾ ಮುಖ್ಯಸ್ಥ ಜೋಕಿಂ ಡಿಸೋಜ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles