27.8 C
Karnataka
Monday, April 7, 2025

ವಿಕಸಿತ ಭಾರತ್ ಯೂತ್ ಪಾರ್ಲಿಮೆಂಟ್

ಮಂಗಳೂರು : ಕೇಂದ್ರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ ಸಂಘಟನ್, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿ.ವಿ. ಹಾಗೂ ಸೈಂಟ್ ಆಗ್ನೆಸ್ ಕಾಲೇಜು ವತಿಯಿಂದ ಎರಡು ದಿನಗಳ ವಿಕಸಿತ ಭಾರತ್ ಯೂತ್ ಪಾರ್ಲಿಮೆಂಟ್ ಶನಿವಾರ ನಗರದ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಆರಂಭಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿದ ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ವೆನಿಸ್ಸಾ ಮಾತನಾಡಿ ‘ ವಿದ್ಯಾರ್ಥಿಗಳು ದೇಶದ ಮುಂದಿನ ರೂವಾರಿಗಳು. ನಾಡಿನ ಸಮಗ್ರತೆ ಹಾಗೂ ಪರಂಪರೆಯನ್ನು ರಕ್ಷಿಸುವ ಮಹತ್ವದ ಜವಾಬ್ದಾರಿ ಯುವ ಜನತೆಯ ಮೇಲಿದೆ..
ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣದ ಮೂಲಕ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವುದು ನಮ್ಮ ಗುರಿಯಾಗಬೇಕು ಎಂದರು.
ನೆಹರು ಯುವ ಕೇಂದ್ರದ ಉಪ ನಿರ್ದೇಶಕ ಲೋಕೇಶ್ ಕುಮಾರ್ ಅವರು ಯೂತ್ ಪಾರ್ಲಿಮೆಂಟ್ ಸ್ಪರ್ಧೆಯ ವಿವರ ನೀಡಿದರು.ಮಂಗಳೂರು ವಿ.ವಿ.ಯ ರಾಜ್ಯ ಶಾಸ್ತ್ರ ಉಪನ್ಯಾಸಕ ಪ್ರೊ.ದಯಾನಂದ ನಾಯಕ್, ರಾಷ್ಟ್ರೀಯ ಸೇವಾ ಯೋಜನೆಯ ಡಾ.ಶೇಷಪ್ಪ ಅಮೀನ್.ಕೆ., ಸೈಂಟ್ ಆಗ್ನೆಸ್ ಕಾಲೇಜಿನ ಎನ್‌ಎಸ್‌ಎಸ್ ಸಂಯೋಜಕ ಡಾ.ಉದಯಕುಮಾರ್.ಬಿ., ನೆಹರು ಯುವ ಕೇಂದ್ರದ ಆಡಳಿತ ಸಹಾಯಕ ಜಗದೀಶ್. ಕೆ. ಉಪಸ್ಥಿತರಿದ್ದರು . ವಿದ್ಯಾರ್ಥಿನಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಯೂತ್ ಪಾರ್ಲಿಮೆಂಟ್‌ನ ತೀರ್ಪುಗಾರರಾಗಿ ಪ್ರೊ.ದಯಾನಂದ ನಾಯಕ್, ಹಿರಿಯ ಪತ್ರಕರ್ತರಾದ ಪಿ.ಬಿ.ಹರೀಶ್ ರೈ, ಪುಷ್ಪರಾಜ್.ಬಿ.ಎನ್, ವಕೀಲ ನಿಶಾನ್.ಎನ್. ಮತ್ತು ರೂಪ ಧರ್ಮಯ್ಯ ಭಾಗವಹಿಸಿದ್ದರು. ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಯೂತ್ ಪಾರ್ಲಿಮೆಂಟ್‌ನಲ್ಲಿ ಪಾಲ್ಗೊಂಡು ‘ ಏಕ ದೇಶ-ಏಕ ಚುನಾವಣೆ’ ವಿಷಯದ ಬಗ್ಗೆ ಅಭಿಪ್ರಾಯ ಮಂಡಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles