32.3 C
Karnataka
Tuesday, April 15, 2025

ಹರಿದ್ವಾರದಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿ ದಿಗ್ವಿಜಯ

ಮ೦ಗಳೂರು: ಹರಿದ್ವಾರದಲ್ಲಿ ವೃಂದಾವನಸ್ಥರಾಗಿರುವ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಪಾದುಕೆಯ ಉಪಸ್ಥಿತಿಯಲ್ಲಿ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ಸ್ವಾಮೀಜಿಯವರ
ದಿಗ್ವಿಜಯ‌ ಕಾರ್ಯಕ್ರಮ ರವಿವಾರ ಜರುಗಿತು.
ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವದ ಅಂಗವಾಗಿ ಹರಿದ್ವಾರದ ವ್ಯಾಸಾಶ್ರಮದಲ್ಲಿ ಎಪ್ರಿಲ್ 8 ರಿಂದ 14 ರ ತನಕ ವಿಶೇಷ ಕಾರ್ಯಕ್ರಮಗಳು‌ ಜರಗುತ್ತಿದ್ದು, ರವಿವಾರ ಎಪ್ರಿಲ್ 13 ರಂದು ಭಾರತದ ವಿವಿಧ ಭಾಗಗಳಿಂದ ಆಗಮಿಸಿದ 30 ಭಜನಾ ಮಂಡಳಿಗಳಿಂದ ಏಕಾಹ ಭಜನೆ, ವಿವಿಧ ಹೋಮ, ಹವನಾದಿಗಳು ಶ್ರೀಮದ್ ಸಂಯಮೀಂದ್ರ ‌ತೀರ್ಥ‌ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
ತಿರುಪತಿಯಿಂದ ವಿಶೇಷವಾಗಿ ತರಿಸಲಾದ ಲಾಡು ಪ್ರಸಾದವನ್ನು‌ ಹಂಚುವ ಕಾರ್ಯದ ಪೂರ್ವಭಾವಿ ಸಿದ್ಧತೆಯಲ್ಲಿ ಭಕ್ತರು ತೊಡಗಿಸಿಕೊಂಡಿದ್ದರು. ಮುಂಬೈಯ ಜಿಎಸ್ ಬಿ ಸೇವಾ ಮಂಡಲ, ಸುಕೃತೀಂದ್ರ ಸ್ವಾಮಿ‌ ಸೇವಾ ಪ್ರತಿಷ್ಠಾನ, ದೆಹಲಿ ಸಮಾಜ, ಬೆಂಗಳೂರು ಸಮಾಜ ಸಹಿತ ಜಿಎಸ್ ಬಿ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ವೈದಿಕ ವೃಂದ ಕಾರ್ಯಕ್ರಮದ ಯಶಸ್ಸಿಗಾಗಿ ತೊಡಗಿಸಿಕೊಂಡಿದ್ದಾರೆ.
ಸೋಮವಾರ ವ್ಯಾಸಮಂದಿರದಲ್ಲಿರುವ ಶ್ರೀ ವೇದವ್ಯಾಸ ದೇವರಿಗೆ ಮತ್ತು ಸುಧೀಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನಕ್ಕೆ ವಿಶೇಷ ಪವಮಾನ‌ ಅಭಿಷೇಕ ನಡೆಯಲಿದೆ.‌ ಅದರೊಂದಿಗೆ ವೃಂದಾವನ ಹಾಗೂ ಪಾದುಕೆಗೆ ಸ್ವರ್ಣ ಪುಷ್ಪಾರ್ಚನೆಯೂ ಜರುಗಲಿದೆ. ಸಂಜೆ ಶ್ರೀಗಳಿಂದ ಆರ್ಶೀವಚನವೂ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹರಿಗುರು ಕೃಪೆಗೆ ಪಾತ್ರರಾಗಲು ದೇಶ, ವಿದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles