21.7 C
Karnataka
Saturday, November 16, 2024

ಡಾ. ಬಿ.ಆರ್.ಅಂಬೇಡ್ಕರ್ ಅವರ 67ನೇ ಮಹಾಪರಿನಿರ್ವಾಣ ದಿನ

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 67ನೇ ಮಹಾಪರಿನಿರ್ವಾಣ ದಿನವನ್ನು ಬುಧವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈದು ಬಳಿಕ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಅಸ್ಪೃಶ್ಯತೆಯ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಮಹಾನ್ ಧೀಮಂತ ನಾಯಕ. ದೇಶದ ಬಡಜನರಿಗೆ ಸಮಾನ ಅವಕಾಶ, ಅಭಿವ್ಯಕ್ತಿ ಸ್ವತಂತ್ರ್ಯ,ಶಿಕ್ಷಣದ ಹಕ್ಕು ನೀಡುವ ನಿಟ್ಟಿನಲ್ಲಿ ಸಂವಿಧಾನವನ್ನು ರಚಿಸಿದರು. ಎಲ್ಲಾ ರೀತಿಯ ತಾರತಮ್ಯಗಳಿಂದ ಮುಕ್ತಗೊಳಿಸಿ ಭಾರತವನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯಲು ಶ್ರಮಿಸಿದರು. ನಾವು
ಅವರ ತತ್ವಾದರ್ಶ, ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂವಿಧಾನ ಆಶಯಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಪದ್ಮರಾಜ್.ಆರ್, ಮಮತಾ ಗಟ್ಟಿ, ಪದ್ಮನಾಬಾ ನರಿಂಗಾನ, ಜೆ.ಅಬ್ದುಲ್ ಸಲೀಂ, ವಿಶ್ವಾಸ್ ದಾಸ್, ಬಿ.ಎಂ ಅಬ್ಬಾಸ್ ಅಲಿ, ಗಣೇಶ್ ಪೂಜಾರಿ, ಅಶ್ರಫ್ ಬಜಾಲ್, ಮುಹಮ್ಮದ್ಕುಂಜತ್ತಬೈಲ್, ಜಯಶೀಲಾ ಅಡ್ಯಂತಾಯ, ಟಿ.ಹೊನ್ನಯ್ಯ, ಪದ್ಮನಾಭ ಅಮೀನ್, ಟಿ.ಕೆ ಸುಧೀರ್, ಸಬಿತಾ ಮಿಸ್ಕಿತ್, ಉದಯ್ ಆಚಾರ್ಯ, ಹೈದರ್ ಬೋಳಾರ್, ಶಾಂತಲಾ ಗಟ್ಟಿ,ಚಂದ್ರಕಲಾ ಜೋಗಿ, ಸಲೀಮ್ ಮಕ್ಕ, ಯಶವಂತ್ ಪ್ರಭು, ನೀತ್ ಶರಣ್, ಲಕ್ಷ್ಮಣ್ ಶೆಟ್ಟಿ, ಯೋಗೀಶ್ ನಾಯಕ್, ಮುಸ್ತಫಾ ಡಿ.ಎಂ, ಮ್ಲಲಿಕಾರ್ಜು ಕೋಡಿಕಲ್, ರವಿರಾಜ್ ಪೂಜಾರಿ ದಂಬೆಲ್, ಸಮರ್ಥ್ ಭಟ್ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ್ ಉಳ್ಳಾಲ್ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಶುಭೋದಯ ಆಳ್ವ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles