22 C
Karnataka
Tuesday, March 4, 2025

ಮಂಗಳೂರು ಮಹಾನಗರ ಪಾಲಿಕೆಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನಿಗೆ 10 ಲಕ್ಷ ರೂ ಫ್ರೋತ್ಸಾಹಧನ ವಿತರಣೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನಿಗೆ 10 ಲಕ್ಷ ರೂ ಫ್ರೋತ್ಸಾಹಧನ ನೀಡಲಾಯಿತು.
ಪಾಲಿಕೆಯ ವತಿಯಿಂದ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮದಡಿ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಕಲಿಸುವ ನಿಟ್ಟಿನಲ್ಲಿ ಯಕ್ಷಗಾನ ತರಬೇತಿ ತರಗತಿಗಳನ್ನು ರಾಜ್ಯಾದ್ಯಂತ ನಡೆಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಗಾನಂ ವಿಶ್ವಗಾನಂ ಯೋಜನೆಯಡಿ 2024-25ನೇ ಸಾಲಿನ ಬಜೆಟ್ ನಲ್ಲಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಸ್ಥಾಯೀ ಸಮಿತಿ ಅಧ್ಯಕ್ಷ ವರುಣ್ ಚೌಟ ಅವರು ಘೋಷಿಸಿದ ರೂ 10.00 ಲಕ್ಷದ ಪ್ರೋತ್ಸಾಹ ಧನವನ್ನು ಮೇಯರ್ ಮನೋಜ್ ಕುಮಾರ್ ಅವರು ಪಟ್ಲ ಫೌಂಡೇಶನಿನ ಕೇಂದ್ರೀಯ ಸಮಿತಿಯ ಜತೆಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ಇವರ ಮೂಲಕ ಟ್ರಸ್ಟಿಗೆ ನೀಡಿದರು.
ಈ ಸಂದರ್ಭದಲ್ಲಿ ಮಹಾಗರಪಾಲಿಕೆಯ ಉಪಮೇಯರ್ ಭಾನುಮತಿ ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ವಿಪಕ್ಷ ನಾಯಕರಾದ ಅನಿಲ್ ಕುಮಾರ್ ವಿವಿಧ ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಮನೋಹರ್ ಶೆಟ್ಟಿ, ಸುಮಿತ್ರ ಕರಿಯ, ಸರಿತಾ ಶಶಿಧರ್, ವೀಣಾ ಮಂಗಳ ಮಾಜಿ ಮೇಯರ್ ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.
ಪಟ್ಲ ಫೌಂಡೇಶನ್ ಗೆ ಈ ಅನುದಾನವನ್ನು ಕೊಡಿಸುವಲ್ಲಿ ವಿಶೇಷವಾಗಿ ಸ್ಪಂದಿಸಿದ ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ, ಮೇಯರ್, ಮಾಜಿ ಮೇಯರ್ ಗಳು, ಆಡಳಿತ ಹಾಗೂ ವಿರೋಧ ಪಕ್ಷದ ಎಲ್ಲಾ ಕಾರ್ಪೊರೇಟರ್ ಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಹಾಗೂ ಕೇಂದ್ರೀಯ ಹಾಗೂ ಎಲ್ಲಾ ಪ್ರಾದೇಶಿಕ ಘಟಕಗಳು ಅಭಿನಂದನೆಗಳನ್ನು ಸಲ್ಲಿಸಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles