ಬ್ಯಾಂಗ್ಕಾಕ್ : ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅನುಪಮ ಸೇವೆಗಾಗಿ ಮಂಗಳೂರಿನ ಬಹುಮುಖ ಪ್ರತಿಭೆ. ಡಾ. ಪ್ರತಿಭಾ ಅವರಿಗೆ ಅಂತರಾಷ್ಟ್ರೀಯ ಸಾಧನಾಶೀಲ ಪ್ರಶಸ್ತಿಯನ್ನು ಒಲಿದಿದೆ.
ಥೈಲ್ಯಾಂಡ್ ಬ್ಯಾಂಕಾಕ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾದ 44ನೇ ಅಂತಾರಾಷ್ಟ್ರೀಯ ಸಾಂಸ್ಕ್ರತಿಕ ಹಬ್ಬದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸಿಲ್ಪಕಾರ್ನ್ ವಿಶ್ವವಿದ್ಯಾಲಯದ ಪ್ರೋ. ಚಿರಪತ್ ಪ್ರಪುಂಡಿದ್ಯ, ಪ್ರೋ. ಸೂಂಬತ್ ಮಂಗ್ನೀಸುಖಸಿರಿ, ಚಲನಚಿತ್ರ ನಿರ್ಮಾಪಕ ಶಂಕ್ರೇಗೌಡ ಮೈಸೂರು. ನಿವೃತ್ತ ಐಎಎಸ್. ಅಧಿಕಾರಿ ಡಾ.ಡಿ.ಎಸ್. ವಿಶ್ವನಾಥ, ಐಸಿಎಫ್ಸಿಐ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್, ಹರಿಹರಪುರ ಶ್ರೀ ಶಂಕರ ಶಿಲ್ಪ ಕಲಾ ಕೇಂದ್ರದ ಮಹೇಶ್ ಹುಲುಗಾರ್, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೆ. ನಾಗರಾಜ, ಮತ್ತು ಚಲನಚಿತ್ರ ನಿರ್ದೇಶಕ ದೇವೇಂದ್ರ ಬಡಿಗೇರ್ ಇತರರು ವೇದಿಕೆಯಲ್ಲಿದ್ದರು.
ಏಪ್ರಿಲ್ 29ರಂದು ಸಿಲ್ಪಾಕೊರ್ನ್ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ 44ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಕರ್ನಾಟಕದ 25 ಕಲಾವಿದರ ಸಾಂಸ್ಕೃತಿಕ ನಿಯೋಗವು ಪಾಲ್ಗೊಂಡಿತ್ತು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರು ಥಾಯ್ ಸಾಂಪ್ರದಾಯಿಕ ನೃತ್ಯ ಮತ್ತು ಪೊಂಗ್ ಲಾಂಗ್ ಸುಗ್ಗಿಯ ನೃತ್ಯವನ್ನು ಪ್ರದರ್ಶಿಸಿದರು. ಕರ್ನಾಟಕದ ಕಲಾವಿದರಿಂದ ಭರತನಾಟ್ಯ, ಜಾನಪದ ನೃತ್ಯ, ಭಾವಗೀತೆ ಮತ್ತು ಚಿತ್ರಗೀತೆ ಮುಂತಾದ ಕಾರ್ಯಕ್ರಮಗಳು ವೀಕ್ಷಕರ ಮನ ಸೂರೆಗೊಂಡವು