ಮಂಗಳೂರು:ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಜಯಂತಿಯನ್ನು ಏ.24 ರಂದು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ ಕೊಠಡಿಯಲ್ಲಿ ಡಾ. ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರವಿರಾಜ್ ಎಚ್. ಜಿ. ಹಾಗೂ ಸಿಬ್ಬಂದಿಗಳಾದ ವೇಣುಗೋಪಾಲ, ದಿವ್ಯಜ್ಯೋತಿ, ವಿಶ್ವನಾಥ್ ಜೋಗಿ, ರುಚಿತಾ, ಜಿಲ್ಲಾ ಮಾಧ್ಯಮ ಪ್ರಾಮಾಣಿಕರಣ ಹಾಗೂ ನಿಗಾ ಹಾಗೂ ಇತರೆ ಸಮಿತಿಯ ಸದಸ್ಯರಾದ ರಘುಪತಿ, ಮಹೇಶ್ ಕುಮಾರ್, ಮಮತಾ, ಗ್ರೀಷ್ಮಾ, ರಂಜಿತ, ಬಾಲಸುಬ್ರಹ್ಮಣ್ಯಂ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.