ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಪ್ರೀಮಿಯಂ ಎಫ್. ಐ. ಆರ್. ನಿಧಿಯಿಂದ 2 ಕೋಟಿ ವೆಚ್ಚದ ಕದ್ರಿ ಗ್ರೌಂಡಿನಿಂದ ಕದ್ರಿ ಕಂಬಳ ರಸ್ತೆವರೆಗೆ ಮಳೆನೀರು ಚರಂಡಿ ಹಾಗೂ ಫುಟ್ಬಾತ್ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಚಾಲನೆ ನೀಡಿದರು
ನಂತರ ಮಾತನಾಡಿದ ಶಾಸಕರು, ಮಳೆಗಾಲದಲ್ಲಿ ಇಲ್ಲಿನ ಸ್ಥಳೀಯರಿಗೆ ಅತೀವ ತೊಂದರೆಯಾಗುತ್ತಿದ್ದ ಬಗ್ಗೆ ಮ.ನ.ಪಾ ಸದಸ್ಯರಾದ ಮನೋಹರ್ ಕದ್ರಿಯವರು ಗಮನಕ್ಕೆ ತಂದಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರೊಂದಿಗೆ ಸಮಾಲೋಚನೆ ನಡೆಸಿ ಪಾಲಿಕೆಯ ಪ್ರೀಮಿಯಂ ಎಫ್.ಐ.ಆರ್. ನಿಧಿಯಿಂದ 2 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ, ಶಕೀಲ ಕಾವಾ, ಭರತ್ ಕುಮಾರ್ ಸೂಟರ್ ಪೇಟೆ, ಗಣೇಶ್ ಕುಲಾಲ್, ಪ್ರಮುಖರಾದ ವಸಂತ ಜೆ ಪೂಜಾರಿ, ಭಾಸ್ಕರ್ ಚಂದ್ರ ಶೆಟ್ಟಿ, ಯಶವಂತ್ ನಾಯಕ್ ತಾರನಾಥ ಶೆಟ್ಟಿ, ಶೈಲೇಶ್, ಮನೋಜ್, ಮಹೇಶ್ ಪಾಂಡ್ಯ, ಸಂಜೀವ ಅಡ್ಯಾರ್, ಸಚಿನ್, ಚಂದ್ರಕಾಂತ್,ಕಮಲಾಕ್ಷ ಪೈ, ರಾಘವೇಂದ್ರ ಬರುವತ್ತಾಯ, ಗಾಡ್ವಿನ್, ಚರಣ್, ನರೇಶ್ ರಾವ್, ನಾಗೇಶ್, ಕುಸುಮಾಕರ್, ಸಹಾನ್, ಅನಿಲ್ ಶೆಟ್ಟಿ, ಶ್ರವಣ್, ರಮಾನಂದ ಸೇಮಿತ, ಅರ್ಚನಾ ನಾಯಕ್, ಸುಜಯ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.