23.4 C
Karnataka
Saturday, November 16, 2024

ಶಿಕ್ಷಣ ಸೇವೆ ಪವಿತ್ರ ಕಾರ್ಯ : ಜಮೀರ್ ಅಹಮದ್ ಖಾನ್

ಕಾಸರಗೋಡು : ಸಮುದಾಯಕ್ಕೆ ಶಿಕ್ಷಣ ನೀಡುವುದು ಪವಿತ್ರ ಕಾರ್ಯ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಕಾಸರಗೋಡು ಜಾಮಿಯಾ ಸ -ಆದಿಯಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ‘ಕ್ವೀನ್ಸ್ ಲ್ಯಾಂಡ್’ ಹಾಸ್ಟೆಲ್ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಮುದಾಯದ ಮಕ್ಕಳಿಗೆ ಶಿಕ್ಷಣ ದೊರೆತಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ವಾಗುತ್ತದೆ ಎಂದು ಹೇಳಿದರು.


ಜಾಮಿಯಾ ಸ -ಆದಿಯ ಸಂಸ್ಥೆ ಎಂಟು ಸಾವಿರ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣ ದವರೆಗೆ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಶಾಫಿ ಸಾದಿ ಅವರು ಇಲ್ಲಿನ ವಿದ್ಯಾರ್ಥಿ ಆಗಿರುವುದು ಸಂತಸದ ವಿಚಾರ. ಎಪಿ ಉಸ್ತಾದ್ ಅವರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಮತ್ತಷ್ಟು ಶಿಕ್ಷಣ ಸೇವೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಕರ್ನಾಟಕ ದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬಜೆಜ್ ನಲ್ಲಿ 540 ಕೋಟಿ ರೂ. ಶಿಕ್ಷಣಕ್ಕೆ ಮೀಸಲಿಟ್ಟಿದ್ದೇವೆ. ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್, ವಿದೇಶಿ ವ್ಯಾಸಂಗಕ್ಕೂ 20 ಲಕ್ಷ ರೂ. ವರೆಗೆ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಮಾಜಿ ಸಚಿವ ಸಿ. ಟಿ. ಅಹಮದ್, ಬಾದಷಾ ಶಾಕಾಫಿ,ಮೌಲಾನಾ ಶಾಫಿ ಸಾದಿ, ನೌಫಲ್, ಅಬೂ ಬಕರ್ ಹಾಜಿ, ಮಹಮದ್ ಅಲಿ ಶಾಕಾಫಿ, ಮಹಿನಾ ಹಾಜಿ, ಹುಸೇನ್ ಸಯಿದಿ, ಜಿ ಎ ಬಾವಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles