ಮ೦ಗಳೂರು: ವೃದ್ದ ಮಾವನನ್ನು ಸೊಸೆ ವಾಕಿಂಗ್ ಸ್ಟಿಕ್ನಿಂದ ಮನಸೋ ಇಚ್ಚೆ ಥಳಿಸಿದ ಘಟನೆ ನಗರದ ಕುಲಶೇಖರ ಬಳಿ ನಡೆದಿದೆ. 87 ವರ್ಷದ ವಯೋವೃದ್ಧ ಪದ್ಮನಾಭ ಸುವರ್ಣ ಅವರು ಹಲ್ಲೆಗೊಳಗಾದವರು.
ಕುಲಶೇಖರದ ನಿವಾಸಿ ಉಮಾಶಂಕರಿ ಹಲ್ಲೆ ನಡೆಸಿದ ಆರೋಪಿಯಾಗಿದ್ದುಈಕೆ ಕೆಇಬಿ ಅಧಿಕಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪದ್ಮನಾಭ ಸುವರ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾ. ೯ ರಂದು ಈ ಘಟನೆ ನಡೆದಿದೆ. ಉಮಾ ಶಂಕರಿಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪತಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಥಳಿಸಿರುವ ಘಟನೆ ಬೆಳಕಿಗೆ ಬಂದಿದ್ದು ಕೂಡಲೇ ಸಹೋದರಿ ಪ್ರಿಯಾ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಪ್ರಿಯಾ ಅವರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು ಆರೋಪಿ ಸೊಸೆಯನ್ನು ಬಂಧಿಸಲಾಗಿದೆ.