ಮ೦ಗಳೂರು: ವಿದ್ಯುತ್ ಶಾಕ್ ತಗುಲಿ ಶಾಮಿಯಾನ ಕಾಮಿ೯ಕ ಮೃತಪಟ್ಟ ಘಟನೆ ಮೂಡುಶೆಡ್ಡೆಯಲ್ಲಿ ಮ೦ಗಳವಾರ ರಾತ್ರಿ ಸ೦ಭವಿಸಿದೆ. ಸೋನು ಸಿಂಗ್ ಗೋಂಡಾ ಮೃತಪಟ್ಟ ಕಾಮಿ೯ಕ.
ಸೋನು ಸಿಂಗ್ ಗೋಂಡಾ ಅವರು ಮೂಡುಶೆಡ್ಡೆಯಲ್ಲಿರುವ ಶಾಮಿಯಾನ ಅಂಗಡಿಯೊ೦ದರಲ್ಲಿ ಕಳೆದ 5 ತಿಂಗಳಿಂದ ಕೆಲಸ ಮಾಡಿಕೊಂಡಿದ್ದು ಮ೦ಗಳವಾರ ಶಾಮಿಯಾನ ಕೆಲಸ ಮುಗಿಸಿಕೊಂಡು ರಾತ್ರಿ 7 ಗಂಟೆಗೆ ಶಾಮಿಯಾನ ಅಂಗಡಿಗೆ ಬಂದಿದ್ದು ನಂತರ ರಾತ್ರಿ 7:45ಕ್ಕೆ ಊಟ ತಯಾರಿಯಲ್ಲಿ ತೊಡಗಿದ್ದರು. ಅಂಗಡಿಯ ಸಿಮೆಂಟ್ ಸೀಟ್ ಗೆ ಅಳವಡಿಸಿದ್ದ ಕಬ್ಬಿಣದ ಪಕ್ಕಾಸಿಗೆ ಕಬ್ಬಿಣದ ರಾಡ್ ಸಿಕ್ಕಿಸಿ ಅದರಲ್ಲಿ ತೊಟ್ಟೆಯೊಂದರಲ್ಲಿ ನೀರುಳ್ಳಿ ನೇತು ಹಾಕಲಾಗಿತ್ತು. ಅದನ್ನು ತೆಗೆಯಲು ಕಬ್ಬಿಣದ ರಾಡನ್ನು ಮುಟ್ಟಿದಾಗ ರಾಡ್ ನಲ್ಲಿದ್ದ ವಿದ್ಯುತ್ ತಗುಲಿತು. ವಿದ್ಯುತ್ ಶಾಕ್ ನಿ೦ದ ಬಿಡಿಸಿದಾಗ ಅವರಲ್ಲಿ ಯಾವುದೇ ಚಲನ ಇಲ್ಲದಿದ್ದು ಕೂಡಲೇ ರಿಕ್ಷಾವೊಂದರಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಗೆ ತಂದಿದ್ದು ಅದಾಗಲೇ ಮೃತಪಟ್ಟಿದ್ದರು. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.