ಮಂಗಳೂರು: ಆದಿತ್ಯ ಬಿರ್ಲಾ ಗ್ರೂಪ್ ಗ್ರಾಸಿಮ್ ಇಂಡಸ್ಟ್ರೀಸ್ ಚಾಮರಾಜನಗರ ವತಿಯಿಂದ ಚಾಮರಾಜನಗರದಲ್ಲಿ ಖಾಲಿ ಇರುವ ಡಿಪ್ಲೋಮಾ ಎಂಜಿನಿಯರ್ , ಪ್ರೊಡಕ್ಷನ್ ಕ್ವಾಲಿಟಿ ಮೆಟೀರಿಯಲ್ ಹ್ಯಾಂಡಲಿಂಗ್ ಮತ್ತು ಸೆಕ್ಷನಲ್ ಇಂಜಿನಿಯರ್ ಹುದ್ದೆಗಳಿಗೆ ನೇರ ಸಂದರ್ಶನ ನವೆಂಬರ 10ರ ಶುಕ್ರವಾರದ ಬೆಳಗ್ಗೆ 10 ರಿಂದ 1.30 ರವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ ಲಾಲ್ ಬಾಗ್ ಇಲ್ಲಿ ಸಂದರ್ಶನ ನಡೆಯಲಾಗುವುದು.
ಸಂದರ್ಶನದಲ್ಲಿ ಡಿಪ್ಲೋಮಾ ಇಂಜಿನಿಯರ್ ಹುದ್ದೆಗೆ ಡಿಪ್ಲೋಮಾ ಕೆಮಿಕಲ್, ಮೆಕ್ಯಾನಿಕಲ್, ಪೆಟ್ರೋ ಕೆಮಿಕಲ್ ವಿದ್ಯಾರ್ಹತೆಯೊಂದಿಗೆ 2 ರಿಂದ 4 ವರ್ಷಗಳ ಅನುಭವ ಹೊಂದಿರುವ 26 ವರ್ಷ ವಯಸ್ಸಿನ ಒಳಗಿನ ಅಭ್ಯರ್ಥಿಗಳು ಹಾಗೂ ಸೆಕ್ಷನಲ್ ಇಂಜಿನಿಯರ್ ಹುದ್ದೆಗೆ ಬಿ.ಇ ಮೆಕ್ಯಾನಿಕಲ್ 3 ರಿಂದ 8 ವರ್ಷ ಅನುಭವ ಅಥವಾ ಡಿಪ್ಲೋಮಾ ಮೆಕ್ಯಾನಿಕಲ್ 5 ರಿಂದ 9 ವರ್ಷ ಅನುಭವ ಅಭ್ಯರ್ಥಿಗಳು ಸ್ವ ವಿವರವುಳ್ಳ ಬಯೋಡೇಟಾದೊಂದಿಗೆ ಭಾಗವಹಿಸಬಹುದು ಎಂದು ಜಿಲ್ಲಾ ಉದ್ಯೋಗಧಿಕಾರಿ ಪ್ರಕಟಣೆ ತಿಳಿಸಿದೆ.