ಮಂಗಳೂರು : ಮಂಗಳೂರು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಜಿಲ್ಲಾ ಉತ್ತೇಜನ ಕೇಂದ್ರದ ಸಹಯೋಗದೊಂದಿಗೆ ರಫ್ತು ನಿರ್ವಹಣಾ ತರಬೇತಿ ಶಿಬಿರ ನಗರದ ಯೆಯ್ಯಾಡಿ ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರದ ಸಂಘದ ಸಭಾಭವನದಲ್ಲಿ ಮಾರ್ಚ್ 24 ರಿಂದ ಮಾರ್ಚ್ 29 ರವರೆಗೆ ನಡೆಯಲಿದೆ.
6 ದಿನಗಳ ಈ ತರಬೇತಿ ಕಾರ್ಯಕ್ರಮವು ಅಂತರಾಷ್ಟ್ರೀಯ ವ್ಯವಹಾರದ ಮಾಹಿತಿಯನ್ನು ನೀಡುವ ಉದ್ದೇಶವನ್ನು ಹೊಂದಿರುತ್ತದೆ. ಈ ತರಬೇತಿಯಲ್ಲಿ ರಫ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಹಾಗೂ ಸಮಗ್ರ ಮಾಹಿತಿಯನ್ನು ನೀಡಲಾಗುತ್ತದೆ.
ತರಬೇತಿ ಶಿಬಿರದಲ್ಲಿ ನೋಂದಣಿ ಮಾಡಲು ಬಯಸುವವರು, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ವೆಬ್‍ಸೈಟ್ ತಿwww.vtpc.karnataka.gov.in ನಲ್ಲಿ ಮಾರ್ಚ್ 15 ರೊಳಗೆ ನೋಂದಾಯಿಸಬಹುದು.
ಹೆಚ್ಚಿನ ಮಾಹಿತಿಗೆ ಯೆಯ್ಯಾಡಿ ಕೈಗಾರಿಕಾ ಪ್ರದೇಶ ಉಪ ನಿರ್ದೇಶಕ ಮಂಜುನಾಥ ಹೆಗಡೆ ದೂ.ಸಂ :9480562936, 8073934390 ಅಥವಾ ಜಿಲ್ಲೆಯ ಕೈಗಾರಿಕಾ ಕಚೇರಿಗಳನ್ನು ಸಂಪರ್ಕಿಸುವಂತೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
