*ಜುಲೈ 1 ರಿಂದ ವೇಳಾಪಟ್ಟಿ ಪರಿಷ್ಕರಣೆ
ಮಂಗಳೂರು : ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ (07377/07378) ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು
ಡಿಸೆಂಬರ್ 2025ರವರೆಗೆ ವಿಸ್ತರಿಸಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ರೈಲುಗಳು ಈಗಿರುವ ಮಾರ್ಗ, ನಿಲುಗಡೆಗಳು ಹಾಗೂ
ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರಿಯಲಿವೆ. ಇದಲ್ಲದೆ, ಜುಲೈ 1ರಿಂದ ಜಾರಿಗೆ ಬರುವಂತೆ 07378 ಮಂಗಳೂರು
ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ನ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.
ಈ ಹಿಂದೆ ಜೂನ್ 30, 2025ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿದ್ದ 07377 ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ
ಎಕ್ಸ್ಪ್ರೆಸ್ ರೈಲು ಈಗ ಜುಲೈ 1ರಿಂದ ಡಿಸೆಂಬರ್ 31, 2025ರವರೆಗೆ ವಿಸ್ತರಿಸಲ್ಪಟ್ಟಿದೆ. ಅದೇ ರೀತಿ, ಜುಲೈ 1, 2025ರವರೆಗೆ
ಸಂಚರಿಸಲಿದೆ ಎಂದು ಸೂಚಿಸಲಾಗಿದ್ದ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು ಈಗ ಜುಲೈ 2,
2025ರಿಂದ ಜನವರಿ 1, 2026ರವರೆಗೆ ವಿಸ್ತರಿಸಲಾಗಿದೆ.
ಜುಲೈ 1, 2025 ರಿಂದ ಜಾರಿಗೆ ಬರುವಂತೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲಿನ ಪರಿಷ್ಕೃತ
ವೇಳಾಪಟ್ಟಿ ಇಂತಿದೆ:
ಪರಿಷ್ಕೃತ ವೇಳಾಪಟ್ಟಿಯಂತೆ, 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು ಮಂಗಳೂರು
ಸೆಂಟ್ರಲ್ನಿಂದ 14:35 ಗಂಟೆಗೆ ಹೊರಡುವ ಬದಲು 16:45 ಗಂಟೆಗೆ ಹೊರಡಲಿದೆ. ನಂತರ ರೈಲು ಬಂಟವಾಳಕ್ಕೆ 17:30/17:32
ಗಂಟೆಗೆ, ಕಬಕಪುತ್ತೂರಿಗೆ 18:00/18:02 ಗಂಟೆಗೆ, ಸುಬ್ರಹ್ಮಣ್ಯ ರೋಡ್ 18:50/19:00 ಗಂಟೆಗೆ, ಸಕಲೇಶಪುರಕ್ಕೆ 21:20/21:30ಗಂಟೆಗೆ, ಹಾಸನಕ್ಕೆ 22:20/22:30 ಗಂಟೆಗೆ, ಅರಸೀಕೆರೆಗೆ 23:20/23:25 ಗಂಟೆಗೆ, ಕಡೂರಿಗೆ 23:59/00:01 ಗಂಟೆಗೆ, ಬೀರೂರಿಗೆ00:08/00:09 ಗಂಟೆಗೆ, ಚಿಕ್ಕಜಾಜೂರಿಗೆ 01:10/01:12 ಗಂಟೆಗೆ, ದಾವಣಗೆರೆಗೆ 01:48/01:50 ಗಂಟೆಗೆ, ಹರಿಹರಕ್ಕೆ 02:03/02:05ಗಂಟೆಗೆ, ರಾಣಿಬೆನ್ನೂರಿಗೆ 02:25/02:27 ಗಂಟೆಗೆ, ಬ್ಯಾಡಗಿಗೆ 02:44/02:46 ಗಂಟೆಗೆ ಮತ್ತು ಎಸ್ಎಂಎಂ ಹಾವೇರಿಗೆ 03:00/03:02ಗಂಟೆಗೆ ಆಗಮಿಸಿ ಹೊರಡಲಿದೆ.
ಇದಾದ ನಂತರ, ರೈಲು ಯಲವಿಗಿಗೆ 03:32/03:33 ಗಂಟೆಗೆ, ಎಸ್ಎಸ್ಎಸ್ ಹುಬ್ಬಳ್ಳಿಗೆ 04:40/04:50 ಗಂಟೆಗೆ, ಅಣ್ಣಿಗೇರಿಗೆ
05:20/05:21 ಗಂಟೆಗೆ, ಗದಗಕ್ಕೆ 06:15/06:20 ಗಂಟೆಗೆ, ಮಲ್ಲಾಪುರಕ್ಕೆ 06:49/06:50 ಗಂಟೆಗೆ, ಹೋಳೆ ಆಲೂರಿಗೆ
07:07/07:08 ಗಂಟೆಗೆ, ಬದಾಮಿಗೆ 07:29/07:30 ಗಂಟೆಗೆ, ಗುಳೇದಗುಡ್ಡ ರೋಡ್ ಗೆ 07:43/07:44 ಗಂಟೆಗೆ, ಬಾಗಲಕೋಟೆಗೆ07:56/07:58 ಗಂಟೆಗೆ, ಆಲಮಟ್ಟಿಗೆ 08:37/08:38 ಗಂಟೆಗೆ, ಮತ್ತು ಬಸವನ ಬಾಗೇವಾಡಿ ರೋಡ್’ಗೆ 08:59/09:00 ಗಂಟೆಗೆಆಗಮಿಸಿ ಹೊರಡಲಿದೆ. ಈ ರೈಲು ಮೊದಲು 09:35 ಗಂಟೆಗೆ ತಲುಪುತ್ತಿದ್ದ ವಿಜಯಪುರಕ್ಕೆ, ಪರಿಷ್ಕೃತ ವೇಳಾಪಟ್ಟಿಯಂತೆ 11:15 ಗಂಟೆಗೆ ತಲುಪಲಿದೆ.
