ಮಂಗಳೂರು: ಮಂಗಳೂರು, ಉಳ್ಳಾಲ, ಮುಲ್ಕಿ ಹಾಗೂ ಮೂಡಬಿದ್ರೆ ತಾಲೂಕು ವ್ಯಾಪ್ತಿಯಲ್ಲಿನ ಆಸಕ್ತ ರೈತರಿಗೆ ಅಥವಾ ಫಲಾಪೇಕ್ಷಿಗಳಿಗೆ “ಜಲಸಂರಕ್ಷಣೆಯ ಮಹತ್ವ ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳ“ ಬಗ್ಗೆ ವಿಚಾರ ವಿಮರ್ಶೆ ಕಾರ್ಯಕ್ರಮವನ್ನು ನಗರದ ಬೆಂದೂರುವೆಲ್‍ಕ್ರಾಸ್ ಸಮೀಪವಿರುವ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಡಿಸೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ವಿಜ್ಞಾನಿಗಳು, ಅPಅಖI ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿ ಡಾ|| ಭವಿಷ್ಯ ತರಬೇತಿ ನೀಡಲಿದ್ದಾರೆ. ಈ ದಿನ ತೋಟಗಾರಿಕೆ ಇಲಾಖೆಯಿಂದ ವಿವಿಧ ವರ್ಗದ ರೈತರಿಗೆ ಸಿಗುವ ಸವಲತ್ತುಗಳಿಗೆ ಫಲಾನುಭವಿಗಳ ನೋಂದಾವಣೆಯನ್ನು ಮಾಡಲಾಗುತ್ತದೆ.
ಆಸಕ್ತರು ತಮ್ಮ ಜಮೀನಿನ ಆರ್.ಟಿ.ಸಿ. ವಿವರ, ಆಧಾರ್ ವಿವರ ಹಾಗೂ ತಮ್ಮ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ತರಬೇತಿಯಲ್ಲಿ ಭಾಗವಹಿಸಲು ಡಿಸೆಂಬರ್27ರೊಳಗೆ ತಮ್ಮ ಭಾಗವಹಿಸುವಿಕೆಯನ್ನು ಖಾತರಿಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0824-2423615 ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.