ಉಜಿರೆ : ತಂದೆ ಚೂರಿಯಿಂದ ಇರಿದು ಮಗನ ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ರವಿವಾರ ರಾತ್ರಿ ನಡೆದಿದೆ. ಜಗದೀಶ ಕೊಲೆಯಾದ ಯುವಕ. ಕೃಷ್ಣಯ್ಯ ಆಚಾರ್ಯ ಕೊಲೆ ಮಾಡಿರುವ ತ೦ದೆ.
ರವಿವಾರ ರಾತ್ರಿ ತಂದೆ ಕೃಷ್ಣಯ್ಯ ಆಚಾರ್ಯ ಮತ್ತು ಮಗ ಜಗದೀಶನ ನಡುವೆ ಜಗಳವಾಗಿದ್ದು ತಂದೆ ಮನೆಯ ಒಳಗಡೆ ಕೋಣೆಗೆ ಹೋಗಿ ಬಾಗಿಲು ಹಾಕಿ ಕೊಂಡಿದ್ದಾರೆ. ಜಗದೀಶನು ಆತನ ವೈದ್ಯಕೀಯ ಚಿಕಿತ್ಸೆಯ ದಾಖಲೆಗಳನ್ನು ಕೊಡುವಂತೆ ಕೇಳಿ ತಂದೆಯವರು ಮಲಗಿದ್ದ ಕೋಣೆಯ ಬಾಗಿಲನ್ನು ಕಾಲಿನಿಂದ ತುಳಿದು ಒಡೆದು ಒಳಗಡೆ ಹೋಗಲು ಪ್ರಯತ್ನಿಸುತ್ತಿದ್ದಾಗ, ತಂದೆ ಅಲ್ಲಿದ್ದ ಚೂರಿಯಿಂದ ಮಗನಭುಜಕ್ಕೆ ಹಾಗೂ ಎದೆಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ