ಮ೦ಗಳೂರು: ಸಿಒಡಿಪಿಯ ಮದರ್ ಥೆರೆಸಾ ಸಭಾಂಗಣದಲ್ಲಿ ಮೈಕಲ್ ಡಿ ಸೋಜ ಮತ್ತು ಕುಟುಂಬದವರಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣ ನೆರವುಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ವಂ.ಪೀಟರ್ ಪೌಲ್ ಸಲ್ಡಾನ್ಹ ವಹಿಸಿ, ಸಾಂಕೇತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಡ್ಡಿರಹಿತ ಸಾಲರೂಪದ ನೆರವನ್ನು ಹಸ್ತಾಂತರಿಸಿದರು.
ಮೈಕಲ್ ಡಿ ಸೋಜ ಅವರು ಮಾತನಾಡಿ ಮಕ್ಕಳು ಹೆತ್ತವರ ಬಗ್ಗೆ ಕಾಳಜಿ ವಹಿಸಿ, ಸಮಾಜದಲ್ಲಿ ಉತ್ತಮ ನಡವಳಿಕೆ ಮತ್ತು ಶಿಕ್ಷಣ ಪಡೆದು, ತಮ್ಮ ಮಾತೃಭಾಷೆಗೆ ಪ್ರಾಮುಖ್ಯತೆ ಕೊಡಬೇಕು ಹಾಗೂ ಹಿರಿಯರು ನಮಗೆ ಮಾಡಿದ ಸಹಾಯವನ್ನು ಎಂದಿಗೂ ಮರೆಯಬಾರದು ಎಂದರು. ಮೈಕಲ್ ಡಿ ಸೋಜ ಅವರಪತ್ನಿ ಫ್ಲಾವಿಯ ಡಿ ಸೋಜ, ಸಿಒಡಿಪಿ ಸಂಸ್ಥೆಯ ನಿರ್ದೇಶಕ ವಂದನೀಯ ಫಾ ವಿನ್ಸೆಂಟ್ ಡಿ ಸೋಜ ಮತ್ತು ಸಹ ನಿರ್ದೇಶಕ ವಂದನೀಯ ಫಾ ಲೊರೆನ್ಸ್ ಕುಟಿನ್ಹಾ ಅವರು ಉಪಸ್ಥಿತರಿದ್ದರು.
ಕುಟುಂಬದ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ 103 ವಿದ್ಯಾರ್ಥಿಗಳಿಗೆ ರೂ.86,60,000/- ಬಡ್ಡಿ ರಹಿತ ಸಾಲವನ್ನು ಬ್ಯಾಂಕಿನ ಮುಖಾಂತ್ರ ವಿತರಿಸಲಾಗುವುದು. ವಂದನೀಯ ಫಾ ಲೊರೆನ್ಸ್ ಕುಟಿನ್ಹಾರವರು ಕಾರ್ಯಕ್ರಮವನ್ನು ನಿರೂಪಿಸಿ,ವಂದಾರ್ಪನೆ ಗೈದರು.