ಮ೦ಗಳೂರು: ಮಂಜಲಕಟ್ಟೆ ಶ್ರೀ ಕೋರ್ದಬ್ಬು ದೈವಸ್ಥಾನದ ಕಂಬೆರ್ಲಕಲ ಜೀರ್ಣೋದ್ಧಾರದ ಶಿಲಾನ್ಯಾಸ ಕಾರ್ಯಕ್ರಮ ಬುಧವಾರ ನಡೆಯಿತು.
ಶಾಸಕ ಡಾವೈ.ಭರತ್ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಬರಲು ಸಾಧ್ಯ. ಧರ್ಮ ಕಾರ್ಯವು ನಡೆಯುತ್ತಿದ್ದರೆ ಸಮಾಜದಲ್ಲಿ ಸನ್ಮಂಗಲ ಉಂಟಾಗುತ್ತದೆ. ಹಿಂದೂ ಸಮಾಜ ಸದೃಢ ಸಮಾಜ ಎಂದರು.
ದೆಪ್ಪುಣಿಗುತ್ತು ಗಿರಿಜಾತೆ ಆರ್.ಭಂಡಾರಿ ಕಾವೂರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮುಖ್ಯ ಅತಿಥಿಗಳಾಗಿದ್ದರು. ವೇಮೂ ದೇರೆಬೈಲು ಶ್ರೀ ವಿಠಲದಾಸ ತಂತ್ರಿಗಳು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.
ಸ್ಥಳೀಯ ಮನಪಾ ಸದಸ್ಯೆ ಗಾಯತ್ರಿ ಎ.ರಾವ್, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ಎಸ್., ವೈದ್ಯರಾದ ಡಾಸತೀಶ್ ಕಲ್ಲಿಮಾರ್ ಬೋಂದೆಲ್, ಉದ್ಯಮಿ ಕಿಶೋರ್ ಸುವರ್ಣ, ಹಿಂದೂಯುವ ಸೇನೆ ಕೇಂದ್ರೀಯ ಮಂಡಳಿ ಉಪಾಧ್ಯಕ್ಷ ಕೊರಗಪ್ಪ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ನವೀನ್ ಪೂಜಾರಿ, ಮನಪಾ ಮಾಜಿ ಸದಸ್ಯ ದೀಪಕ್ ಪೂಜಾರಿ, ರಂಜಿನಿ ಪುರುಷೋತ್ತಮ ಗಟ್ಟೆಮನೆ, ದೈವಸ್ಥಾನದ ಪ್ರಮುಖರಾದ ಸುಧಾಕರ ಶೆಟ್ಟಿ ಕಾವೂರುಗುತ್ತು, ಶಂಕರ ಶೆಟ್ಟಿ ನಂದನಕೆರೆ, ಮಮತಾ ಡಿ.ಶೆಟ್ಟಿ ಕಾವೂರುಗುತ್ತು, ಶ್ರೀನಿವಾಸ ದುಗ್ಗಣಮನೆ, ಭಾಸ್ಕರ ಗುರಿಕಾರ, ಶೇಖರ ಕುಲಾಲ್, ಮಂಜುನಾಥ ಪ್ರಭು, ಪುರುಷೋತ್ತಮ ಎನ್.ಪೂಜಾರಿ, ಭರತ್ ಅಡಪ ಮುಂತಾದವರು ಉಪಸ್ಥಿತರಿದ್ದರು.
ಶ್ರೀಧರ ಎಂ. ಸ್ವಾಗತಿಸಿದರು. ಭರತ್‌ರಾಜ್ ಪ್ರಸ್ತಾವಿಸಿದರು. ಪ್ರಮೀಳಾ ವಿಜ್ಞಾಪನಾ ಪತ್ರ ವಾಚಿಸಿದರು. ದೇವಿಕಾ ಸುಳ್ಯ ವಂದಿಸಿದರು. ಮೋಹನ್‌ದಾಸ್ ಮರಕಡ ನಿರೂಪಿಸಿದರು.