ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹೊಸ ಪ್ರಾದೇಶಿಕ ಕೇಂದ್ರ ತಲೆ ಎತ್ತಲಿದೆ.
ಹೊಸ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಜನವರಿ 17) ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಭಾಗದ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವುದು ಇದರಿಂದ ಸಾಧ್ಯವಾಗಲಿದೆ. ಆರೋಗ್ಯ ಕ್ಷೇತ್ರದ ಪ್ರಗತಿಯಲ್ಲಿ ಇದು ಮಹತ್ವದ ಹೆಜ್ಜೆ ಕೂಡ ಆಗಿದೆ.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
1996ರಲ್ಲಿ ಪ್ರಾರಂಭವಾದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಆವಿμÁ್ಕರಗಳು, ಉತ್ತಮ ಯೋಜನೆಗಳನ್ನು ಆರಂಭಿಸಿದೆ. ಗುಣಮಟ್ಟದ ಆರೋಗ್ಯ ಒದಗಿಸಲು ಇದು ಸಹಕಾರಿಯಾಗಿದೆ. ಬೆಳಗಾವಿ, ಕಲಬುರಗಿ ಮತ್ತು ಮಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಹೆಚ್ಚು ಜನರಿಗೆ ಆರೋಗ್ಯ ಸೌಲಭ್ಯ ಒದಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.
ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯವು ಮೌಲ್ಯಮಾಪನ ಪದ್ಧತಿಗಳನ್ನು ಆಧುನೀಕರಿಸಲು ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳನ್ನು ಪರಿಚಯಿಸಿದ ಮೊದಲ ಆರೋಗ್ಯ ವಿಶ್ವವಿದ್ಯಾಲಯವಾಗಿದೆ.
ಪ್ರತಿ ಪೆÇ್ರೀಗ್ರಾಂ ಮತ್ತು ಕೋರ್ಸ್‍ಗೆ ವಿಶಿಷ್ಟವಾದ ಮೌಲ್ಯಮಾಪನ ಬ್ಲೂಪ್ರಿಂಟ್ ಪ್ರಕಾರ ಸಮಗ್ರ ಪ್ರಶ್ನೆ ಬ್ಯಾಂಕ್ ಸ್ಥಾಪಿಸುವುದು ಈ ವಿವಿಯ ಗಮನಾರ್ಹ ಸಾಧನೆಯಾಗಿದೆ. ಮಂಗಳೂರಿನಲ್ಲಿ ಈ ಕೇಂದ್ರದ ಸ್ಥಾಪನೆಯು ಗ್ರಾಮೀಣ ಮತ್ತು ನಗರಗಳ ನಡುವಿನ ಆರೋಗ್ಯ ಶಿಕ್ಷಣದ ಅಂತರವನ್ನು ಕಡಿಮೆ ಮಾಡಲಿದೆ.