24.3 C
Karnataka
Friday, April 4, 2025

ಉಚಿತ ಅರೋಗ್ಯ ವೈದ್ಯಕೀಯ ತಪಾಸಣಾ ಶಿಬಿರ

ಮಂಗಳೂರು: ತಲಪಾಡಿಯ ಶ್ರಿಕೃಷ್ಣ ಭಜನಾ ಮಂದಿರ ಇದರ 64ನೇ ವಾರ್ಷಿಕೋತ್ಸವ ಪ್ರಯುಕ್ತ ಸಾರ್ವಜನಿಕರಿಗೆ
ಉಚಿತ ಅರೋಗ್ಯ ವೈದ್ಯಕೀಯ ತಪಾಸಣಾ ಶಿಬಿರವನ್ನು ದಿನಾಂಕ 3.12.2023ರಂದು ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ, ಕೃಷ್ಣ ನಗರ, ಕೆ.ಸಿ ರೋಡು ಇಲ್ಲಿ ಏರ್ಪಡಿಸಲಾಗಿದೆ.ನಗರದ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಲಕ್ಷ್ಮಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಮಂಗಳೂರು ಹಾಗೂಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಇದರ ನೇತೃತ್ವದಲ್ಲಿ ತಪಾಸಣಾ ಶಿಬಿರ ವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ
ಸಾಮಾನ್ಯ ಆರೋಗ್ಯ ತಪಾಸಣೆ (ಜನರಲ್ ಚಿಕಿತ್ಸೆ)

  • ಕಿವಿ ಮೂಗು ಗಂಟಲು ತಪಾಸಣೆ• ಚರ್ಮರೋಗ ತಪಾಸಣೆ,ಕಣ್ಣಿನ ತಪಾಸಣೆ (ವೈದ್ಯರ ಶಿಫಾರಸ್ಸಿನ ಮೇರೆಗೆ ಕನ್ನಡಕವನ್ನು ಸಹ ಉಚಿತವಾಗಿ ನೀಡಲಾಗುವುದು.)• ಮಧುಮೇಹ ಮತ್ತು ರಕ್ತದ ಒತ್ತಡ ಪರೀಕ್ಷೆ ಹೃದಯ ಸಂಬಂಧಿ ರೋಗ ತಪಾಸಣೆ (ECG)• ಕಣ್ಣಿನ ಪೊರೆಯನ್ನು ನಿರ್ಮೂಲನೆ ಮಾಡುವ ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುವುದು.ಈ ಸೌಲಭ್ಯ ಗಳು ಬಿ.ಪಿ.ಎಲ್ ಕಾರ್ಡ್‌ದಾರರಿಗೆ ಮಾತ್ರ ಅನ್ವಯವಾಗುವುದು.
    ಪರಿಸರದ ನಾಗರಿಕರು ಶಿಬಿರದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಶ್ರೀ ಕೃಷ್ಣ ಭಜನಾ ಮಂದಿರ ಮತ್ತು ಶ್ರೀ ಕೃಷ್ಣ ಕ್ರಿಕೆಟರ್ಸ್ (ಲಿ.) ಕೃಷ್ಣನಗರ, ಜೆ.ಪಿ. ರೋಡು, ತಲಪಾಡಿ,ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: 9480265943 / 9902270682

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles