ಮ೦ಗಳೂರು: ಮಂಗಳೂರಿನ ಬಾಲ ಮರಿಯಮ್ಮನವರ ದೇವಾಲಯ, ಬಜ್ಜೋಡಿ, ಸಭಾಂಗಣದಲ್ಲಿ ಆಕ್ಟೋಬರ್ 20 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ವಂದನೀಯ ಫಾ.ಡೊಮಿನಿಕ್ ವಾಜ್ ರವರು ಪ್ರಾರ್ಥನೆ ನಡೆಸಿ ಆಶೀರ್ವದಿಸಿದರು, ಡೊ ಅಕ್ಶಯ್, ಸ್ಥಳೀಯ ಕಾರ್ಪೊರೇಟರ್ ಕೇಶವ ಮರೊಳಿ ಹಾಗೂ ಕಥೊಲಿಕ್ ಸಭೆಯ ಅಧ್ಯಕ್ಷ ವಿನ್ಸೆಂಟ್ ಪಿಂಟೊ ದೀಪ ಬೆಳಗಿಸಿ ಉದ್ಘಾಟನೆ ನಡೆಸಿದರು.
ಫಾದರ್ ಮುಲ್ಲರ್ ಆಸ್ಪತ್ರೆಯ ಡಾ. ವಿದ್ಯಾ ಮೊಹನ್, ಡಾ. ಕೆವಿನ್ ಪಾಯ್ಸ್ ಹಾಗೂ ಸಿಂಬದಿಯವರ ಸಹಕಾರದಿಂದ ಕಿವಿ,ಮೂಗು, ಗಂಟಲು, ಸಾಮಾನ್ಯ್ ತಪಾಸಣೆ, ಮಕ್ಕಳ ಶಿಶ್ರೂತೆ ನಡೆಯುತು. ಸುಮಾರು 300 ಕ್ಕೂ ಮೀರಿ ಸ್ಶಳೀಯ ನಾಗರಿಕರು ಇದರ ಪ್ರಯೊಜನ ಪಡೆದರು. ದೇವಾಲಯದ ಪಾಲನ ಸಭೆಯ ಉಪಾಧ್ಯಕ್ಷ ಪ್ರಕಾಶ್ ಸಲ್ಡಾನ್ಹ, ಆಯೊಗದ ಸಂಚಾಲಕಿ ರೆನಿಟಾ ನಜ್ರೆತ್ , ಶಿಬಿರ ಆಯೋಜಕರಾದ ಕಥೊಲಿಕ್ ಸಭೆಯ ಬಜ್ಜೊಡಿ ಘಟಕದ ಸದ್ಯಸರು ಹಾಗೂ ಸೇವಾ ಆಯೋಗದ ಸದ್ಯಸರು ಹಾಜರಿದ್ದರು. ಕಥೊಲಿಕ್ ಸಭೆಯ ಕಾರ್ಯದರ್ಶಿ ಐರಿನ್ ಪಿಂಟೊ ನಿವ೯ಹಿಸಿಸಿದರು. ಅಧ್ಯಕ್ಷ ವಿನ್ಸೆಂಟ್ ಪಿಂಟೊ ವ೦ದಿಸಿದರು.