23.1 C
Karnataka
Saturday, November 23, 2024

ಕೊರಗ ಭಾಷೆಗೂ 2000 ಕಿಮೀ ದೂರದಲ್ಲಿರುವ ಬ್ರಾಹುಯಿ ಭಾಷೆಗೂ ಸಾಮ್ಯತೆ!

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಲ್ಲಿ, ಉತ್ತರ ದ್ರಾವಿಡ ಭಾಷೆಗಳು ಮತ್ತು ಕೊರಗ ಭಾಷೆಯ ಅನುವಂಶಿಕ ವ್ಯಾಕರಣ ಲಕ್ಷಣಗಳಲ್ಲಿ ಸಾಮ್ಯತೆ ಕಂಡುಬಂದಿದೆ.ಪಾಕಿಸ್ತಾನದಲ್ಲಿ 2000 ಕಿಮೀ ದೂರದಲ್ಲಿರುವ ಬ್ರಾಹುಯಿಯೊಂದಿಗೆ ಭಾಷಾ ಹೋಲಿಕೆ ಇರುವುದು ಅಚ್ಚರಿಮೂಡಿಸಿದೆ.
ಕೊರಗರ ಮಾತೃಸಂಬಂಧೀ ಜೀನೋಮ್‍ಗಳ (DNA) ಕುರಿತು ನಡೆಸಿದ ಅಧ್ಯಯನದಲ್ಲಿ, ಕೊರಗ ಭಾಷೆ ಸಿಂಧೂ ನಾಗರೀಕತೆಯ ಅವನತಿಯ ಸಮಯದಲ್ಲಿ ದಕ್ಷಿಣದ ಕಡೆಗೆ ಓಡಿಹೋದ ಒಂದು ಮಾತೃಭಾಷೆಯನ್ನು ಪ್ರತಿನಿಧಿಸುತ್ತದೆ, ಎಂದು ತಿಳಿದುಬಂದಿದೆ. ಪ್ರಮುಖ ಲೇಖಕರಲ್ಲಿ ಒಬ್ಬರಾದ ಜೈಸನ್ ಸಿಕ್ವೇರಾ,ಕೊರಗರ ಅನುವಂಶಿಕತೆಯು ನಮಗೆ ಹಿಂದಿನ ಕನಿಷ್ಟ ಎರಡುನಿರ್ಣಾಯಕ ಕಾಲಾವಧಿಗಳನ್ನು ತಿಳಿಸುತ್ತದೆ. ಮಾತೃಸಂಬಂಧಿ ವಂಶವಾಹಿ ಸಂಗ್ರಹ (ಜೀನ್ ಪೂಲ್) ಸುಮಾರು16,000 ವರ್ಷಗಳ ಹಿಂದಿನ ಪ್ಲೀಸ್ಟೋಸೀನ್ ಯುಗಕ್ಕೆ ಸಂಬಂಧಿಸಿದ್ದರೆ, ಪಿತೃ ವಂಶವಾಹಿ ಸಂಗ್ರಹವು ಮತ್ತ ಹಿಂದಕ್ಕೆ ಹೋಗಿ ಸುಮಾರು 30,000 ವರ್ಷಗಳ ಹಿಂದಿನ ಕೊನೆಯ ಗ್ಲೇಶಿಯಲ್ ಗರಿಷ್ಠ (LGM) ಯುಗಕ್ಕೆಸೇರಿರುತ್ತದೆ. ಈ ಯುಗವು ಭಾರತೀಯ ಉಪಖಂಡದ ಮೂಲ ಪಿತೃ ಅನುವಂಶಿಕತೆ ರೂಪುಗೊಂಡ ಕಾಲ,” ಎನ್ನುತ್ತಾರೆ.
ಈ ಅಧ್ಯಯನದ ಸಹ ಲೇಖಕ, ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥಪ್ರೊ. ಮುಸ್ತಾಕ್ ಎಮ್.‍ಎಸ್ ಅವರ ಪ್ರಕಾರ “ದಕ್ಷಿಣ ಭಾರತದ ಪ್ರಾಚೀನ ಡಿಎನ್‍ಎ ದೊರೆಯದಿರುವಾಗ ಈಪ್ರಾಚೀನ ಬುಡಕಟ್ಟು ಸಮುದಾಯ ಉತ್ತಮ ಬದಲಿ ಪ್ರತಿನಿಧಿಯಾಗಿ ಕಂಡುಬರುತ್ತಿದೆ,” ಎನ್ನುತ್ತಾರೆ.
ವಿಶ್ವಪ್ರಸಿದ್ಧ ಭಾಷಾಶಾಸ್ತ್ರಜ್ಞ, ಡಾ. ಜಾರ್ಜ್ ವಾನ್ ಡ್ರೆಮ್ (ಬರ್ನ್ ವಿಶ್ವವಿದ್ಯಾಲಯ, ಸ್ವಿಝರ್‌ಲ್ಯಾಂಡ್), ಡಾ.
ವಿನುತಲಕ್ಷ್ಮಿ ಮತ್ತು ಡಾ. ರಣಜಿತ್ ದಾಸ್ (ಯೆನಪೊಯಾ, ಡೀಮ್ಡ್ ಆಗಲಿರುವ ವಿಶ್ವವಿದ್ಯಾಲಯ) ಈ ಪ್ರಬಂಧದ
ಸಹ ಲೇಖಕರಾಗಿದ್ದಾರೆ. ಈ ಸಂಶೋಧನಾ ಪ್ರಬಂಧ, ಪ್ರತಿಷ್ಠಿತ ʼಫ್ರಾಂಟಿಯರ್ಸ್‌ ಇನ್ ಜೆನೆಟಿಕ್ಸ್ʼ ನಲ್ಲಿಪ್ರಕಟಗೊಂಡಿದೆ.ಕೊರಗ ಬುಡಕಟ್ಟು ಮುಖ್ಯವಾಗಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭಾಗಗಳಲ್ಲಿ, ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಮತ್ತು ಉತ್ತರ ಕನ್ನಡದ ಶಿವಮೊಗ್ಗ ಮತ್ತು ಕೊಡಗಿನ ಪಕ್ಕದ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಅದು ಈ ಭಾಗದ ಅತ್ಯಂತ ಬಡ ಮತ್ತು ಅಳಿವಿನ ಅಂಚಿನಲ್ಲಿರುವ ಬುಡಕಟ್ಟುಗಳಲ್ಲಿ ಒಂದಾಗಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles