ಬಂಟ್ವಾಳ : ಬಂಟ್ವಾಳದ ಅಜ್ಜಿಬೆಟ್ಟು ಮೈದಾನ ಬಳಿ ಮಹಿಳೆಯ ಕುತ್ತಿಗೆಯಿ೦ದ ಚಿನ್ನದ ಸರ ಎಳೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬ೦ಧಿಸಿದ್ದಾರೆ.
ಮಂಗಳೂರು ಬೈಕಂಪಾಡಿ ಅಂಗರೆಗುಂಡಿ ನಿವಾಸಿ ಅಶೋಕ (34) ಹಾಗೂ ಶೇಡಿಗುರಿ ದಂಬೇಲ್ ನಿವಾಸಿ ಸಚಿನ್ (34) ಬ೦ಧಿತ ಆರೋಪಿಗಳು.
ಡಿ.14ರ೦ದು ಬಂಟ್ವಾಳದ ಅಜ್ಜಿಬೆಟ್ಟು ಮೈದಾನ ಬಳಿ ವೃದ್ದೆಯೋವ೯ರ ಕುತ್ತಿಗೆಯಲ್ಲಿದ್ದ 11/2 ಪವನ ತೂಕದ ಚಿನ್ನದ ಸರವನ್ನು ಆರೋಪಿಗಳು ಕಸಿದು ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬ೦ಧಿಸಿದರು. ಸುಲಿಗೆ ಮಾಡಿದ 50,000 ರೂ ಮೌಲ್ಯದ 1 ½ ಪವನ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಸೇರಿ, ಒಟ್ಟು 75000/ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನ ಪಡಿಸಿರುತ್ತಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ಒಳಪಡಿಸಲಾಗಿದೆ.