ಮ೦ಗಳೂರು: ಬಸ್ಸು ಹತ್ತುವ ಸಮಯ ಮಹಿಳೆಯ ಹ್ಯಾಂಡ್ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳು ತುಂಬಿದ್ದ ಪಸ್‌೯ ಕಳವು ಮಾಡಿರುವ ಘಟನೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ನಡೆದಿದೆ.
ಮಹಿಳೆಯೋವ೯ರು ತನ್ನ ತ೦ದೆಯ ಜತೆ ಜ. 12 ರಂದು ಬೆಳಿಗ್ಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಮಂಗಳೂರಿನಿಂದ ಬಂದ ಮೈಸೂರು ಬಸ್ಸುಹತ್ತಿದ್ದರು. ಬಸ್ಸಿನಲ್ಲಿ ತುಂಬಾ ಪ್ರಯಾಣಿಕರಿದ್ದುದರಿಂದ ನಿಂತು ಕೊಂಡು ಹ್ಯಾಂಡ್ ಬ್ಯಾಗನ್ನು ಆಧಾರ್ ಕಾರ್ಡ್ ತೆಗೆಯುವ ಬಗ್ಗೆ ನೋಡಿದಾಗ ಹ್ಯಾಂಡ್ ಬ್ಯಾಗಿನ ಜಿಪ್ ಸ್ವಲ್ಪ ತೆರೆದು ಕೊಂಡಿದ್ದು, ಬಳಿಕ ನೋಡಿದಾಗ ಹ್ಯಾಂಡ್ ಬ್ಯಾಗಿನ ಒಳಗಡೆ ಇನ್ನೊಂದು ಸಣ್ಣ ಬ್ಯಾಗ್‌ನಲ್ಲಿ ಇಟ್ಟಿದ್ದ ಚಿನ್ನಾಭರಣಗಳ ಪರ್ಸ್ ಇಟ್ಟ ಸ್ದಳದಲ್ಲಿ ಇರಲಿಲ್ಲ. ಅವರು ಕೂಡಲೇ ಬಸ್ಸು ನಿರ್ವಾಹಕರಲ್ಲಿ ವಿಚಾರ ತಿಳಿಸಿದಾಗ ಬಸ್ಸು ನಿರ್ವಾಹಕರು ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ವಿಚಾರಿಸಿರುತ್ತಾರೆ, ಈ ಘಟನೆಯ ಬಗ್ಗೆ ಪರಿಶೀಲಿಸುವಾಗ ಪುತ್ತೂರಿನಲ್ಲಿ ಬಸ್ಸು ಹತ್ತುವ ಸಮಯ ವಿಪರೀತ ಪ್ರಯಾಣಿಕರು ಇದ್ದುದರಿಂದ ಕಳ್ಳರು ಬ್ಯಾಗಿನ ಒಳಗಡೆ ಪರ್ಸ್‌ನಲ್ಲಿ ಇಟ್ಟಿದ್ದ ಚಿನ್ನಾಭರಣಗಳು ತುಂಬಿದ್ದ ಪರ್ಸನ್ನು ಕಳವು ಮಾಡಿಕೊಂಡು ಹೋಗಿದ್ದರು. ಕಳವಾದ ಪರ್ಸ್ ನಲ್ಲಿ ಒಟ್ಟು ಸುಮಾರು 136 ಗ್ರಾಂ ಚಿನ್ನಾಭರಣಗಳಿದ್ದು, ಅಂದಾಜು ಮೌಲ್ಯ ರೂ 7,94,000/- ಆಗಬಹುದು. ಈ ಬಗ್ಗೆ ಪುತ್ತೂರು ನಗರ ಠಾಣೆಯನ್ನಿ ಪ್ರಕರಣ ದಾಖಲಾಗಿರುತ್ತದೆ.