21.7 C
Karnataka
Saturday, November 16, 2024

ಗೋವಿಗಾಗಿ ಮೇವು ಹೊರೆಕಾಣಿಕೆ ಕೇಂದ್ರ ಉದ್ಘಾಟನೆ

ಮಂಗಳೂರು: ಗೋವನಿತಾಶ್ರಯ ಟ್ರಸ್ಟ್ ಮಂಗಳೂರು, ಗೋವರ್ಧನ ಪೂಜಾ ಸಮಿತಿ ಆಶ್ರಯದಲ್ಲಿ ಇದೇ ಬರುವ ಡಿ.16,17ರಂದು ಕದ್ರಿ ಮೈದಾನದಲ್ಲಿ ನಡೆಯಲಿರುವ ಗೋವರ್ಧನ ಪೂಜೆಯ ಗೋವಿಗಾಗಿ ಮೇವು ಹೊರೆಕಾಣಿಕೆ ಅರ್ಪಣೆ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ಶರವು ಮಹಾಗಣಪತಿ ದೇವಸ್ಥಾನ ವಠಾರದಲ್ಲಿ ಶನಿವಾರ ಬೆಳಗ್ಗೆ ನಡೆಯಿತು.
ಈ ವೇಳೆ ಮಾತಾಡಿದ ಗೋವನಿತಾಶ್ರಯ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅವರು, “ಕಟುಕರು ನಮ್ಮ ಗೋಮಾತೆಯನ್ನು ಮಾಂಸ ಮಾಡಲು ಸಾಗಾಟ ಮಾಡುತ್ತಿದ್ದಾರೆ. ಅದನ್ನು ತಡೆಯುವ ಪುಣ್ಯದ ಕೆಲಸವನ್ನು ವಿಹಿಂಪ, ಬಜರಂಗದಳದ ಕಾರ್ಯಕರ್ತರು ಮಾಡುತ್ತಿದ್ದಾರೆ. ತಂದೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಎಷ್ಟಿದೆಯೋ ಅಷ್ಟೇ ಎರಡನೇ ತಾಯಿಯಾದ ಗೋವನ್ನು ರಕ್ಷಿಸುವ ಹೊಣೆಯು ಕೂಡ ನಮ್ಮ ಮೇಲಿದೆ. ನಮ್ಮಲ್ಲಿರುವ ಗೋವನಿತಾಶ್ರಯ ಕೇಂದ್ರಗಳು ನಿರ್ವಹಣೆ ಮಾಡಲು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿವೆ. ಹೀಗಾಗಿ ಗೋವಿಗಾಗಿ ಮೇವು ಹೆಸರಿನಲ್ಲಿ ಗೋವಿನ ಮೇವಿಗಾಗಿ ಜನರಿಂದ ವಸ್ತು ಮತ್ತು ಧನ ಸಂಗ್ರಹಣೆಯ ಕಾರ್ಯಕ್ಕೆ ಇಳಿದಿದ್ದೇವೆ. ಈ ಬಾರಿ ಒಂದು ಕೋಟಿ ರೂ. ನಿಧಿ ಸಂಗ್ರಹಣೆಯ ಗುರಿಯನ್ನು ಹೊಂದಿದ್ದೇವೆ. ಇದಕ್ಕೆ ಜನರೆಲ್ಲರೂ ತುಂಬು ಹೃದಯದಿಂದ ಸಹಕಾರ ನೀಡಬೇಕು” ಎಂದರು.
ಬಳಿಕ ಮಾತಾಡಿದ ಜಗದೀಶ್ ಶೇಣವ ಅವರು, “ಗೋವನಿತಾಶ್ರಯ ಟ್ರಸ್ಟ್ ಮೂಲಕ ಪಜೀರಿನಲ್ಲಿ ಕಳೆದ ಎರಡು ದಶಕಗಳಿಂದ ಗೋವುಗಳನ್ನು ಸಾಕುವ ಪುಣ್ಯದ ಕೆಲಸವನ್ನು ಮಾಡುತ್ತಿವೆ. ಈಗ 385 ಗೋವುಗಳನ್ನು ಸಾಕಲಾಗುತ್ತಿದೆ. ಇಂದಿನ ದಿನಗಳಲ್ಲಿ ಸಂಬಳ ಕೊಟ್ಟರೂ ಕೆಲಸಕ್ಕೆ ಜನ ಸಿಗುವುದಿಲ್ಲ. ಹೀಗಾಗಿ ಅನೇಕ ಸಮಸ್ಯೆಗಳು ಎದುರಾಗಿವೆ. ಇಲ್ಲಿನ ಮಾರ್ವಾಡಿಗಳು ರಾಜಸ್ಥಾನದಲ್ಲಿನ ಗೋಶಾಲೆಗಳಿಗೆ ಲಕ್ಷಗಟ್ಟಲೆ ದೇಣಿಗೆ ಕೊಡುತ್ತಾರೆ. ಆದರೆ ನಮಗೆ ಈ ಬಗ್ಗೆ ಯೋಗ್ಯ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಅದ್ಧೂರಿಯಾಗಿ ಮದುವೆ ಮತ್ತಿತರ ಕಾರ್ಯಕ್ರಮ ಮಾಡುವಾಗ ಅಲ್ಪಪ್ರಮಾಣದಲ್ಲಿ ಗೋವುಗಳ ರಕ್ಷಣೆಗೂ ಮನಸು ಮಾಡಿದಲ್ಲಿ ಖಂಡಿತಾ ಸಾಧ್ಯ” ಎಂದರು.
ವೇದಿಕೆಯಲ್ಲಿ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ವೇದಮೂರ್ತಿ ರಾಘವೇಂದ್ರ ಶಾಸ್ತ್ರಿ ವಿಹಿಂಪ ಜಿಲ್ಲಾಧ್ಯಕ್ಷ ಹೆಚ್.ಕೆ. ಪುರುಷೋತ್ತಮ್, ಕೃಷ್ಣಮೂರ್ತಿ, ಸುಧಾಕರ್ ಪೇಜಾವರ, ಪೊಳಲಿ ಗಿರೀಶ ಕದ್ರಿ, ಮನೋಹರ್ ಸುವರ್ಣ, ಕರುಣಾಕರ, ಗೋಪಾಲ ಕುತ್ತಾರ್, ಭುಜಂಗ ಕುಲಾಲ್, ಶರಣ್ ಪಂಪ್ ವೆಲ್, ಪುನೀತ್ ಪಂಪ್ ವೆಲ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles