ಮ೦ಗಳೂರು: ಪಂಚಾಯತ್ ರಾಜ್ ಹಾಗೂ ನಗರಾಡಳಿತದ ಜನಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಾನಸಿಕ ನೆಮ್ಮದಿ ಹಾಗೂ ಸೌಹಾರ್ದ ಸಂಬಂಧಗಳನ್ನು ಬೆಳೆಸುವ ಉದ್ದೇಶದಿಂದ ಗ್ರಾಮ ಸ್ವರಾಜ್ ಟ್ರಸ್ಟ್ (ರಿ) ಮತ್ತು ಸ್ಥಳೀಯ ಆಡಳಿತಗಳ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಗಳು, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಸಹಕಾರದೊಂದಿಗೆ “ಹೊಂಬೆಳಕು” ಎನ್ನುವ ನಾಮಂಕಿತದೊಂದಿಗೆ ಮಾ.2ರ೦ದು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಆಮ೦ತ್ರಣ ಪತ್ರಿಕೆಯನ್ನು ನಗರದ ಹೊಟೇಲ್ ಓಶಿಯನ್ ಪಲ್‌೯ ಸಭಾ೦ಗಣದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ವಿಧಾನಪರಿಷತ್ ಸದಸ್ಯ ಹಾಗೂ ಸಂಘಟನಾ ಸಮಿತಿ ಗೌರವಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಆಮ೦ತ್ರಣ ಪತ್ರಿಕೆಯನ್ನುಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿ೦ದ ಸುಮಾರು 5 ರಿಂದ 6 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಆಕರ್ಷಕ ಪಥಸಂಚಲನೆಗಳೊಂದಿಗೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಉಭಯ ಜಿಲ್ಲೆಯ ಶಾಸಕರು , ಸಮಾಜದ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.ಆಕರ್ಷಕ ನಗದು ಬಹುಮಾನಗಳನ್ನು ನೀಡುವುದರ ಜೊತೆಗೆ ಭಾಗವಹಿಸುವ ಸಂಸ್ಥೆಗಳಿಗೆ ಸ್ಮರಣಿಕೆ ಹಾಗೂ ಸದ್ಯಸರಿಗೆ ಟಿ- ಶರ್ಟ್, ಕ್ಯಾಪ್ ನೀಡಲಾಗುವುದು . ಈಗಾಗಲೇ ಸರಕಾರದ ಸುತ್ತೋಲೆಯ ಮೂಲಕ ಉಭಯ ಜಿಲ್ಲೆಗಳ ಎಲ್ಲಾ ಸ್ಥಳೀಯ ಆಡಳಿತಗಳ ಜನಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಿರುತ್ತಾರೆ ಎ೦ದರು.
ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಜೆಸಿ೯ಯನ್ನು ಬಿಡುಗಡೆಗೊಳಿಸಲಾಯಿತು.ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ,ಟ್ರಸ್ಟ್ ನ ಪ್ರವೀಣ್ ಚ೦ದ್ರ ಆಳ್ವ, ಸುಭಾಷ್ ಚ೦ದ್ರ ಶೆಟ್ಟಿ, ಲಾರೆನ್ಸ್ , ಸ೦ತೋಷ್ ಉಪಸ್ಥಿತರಿದ್ದರು
