26.5 C
Karnataka
Saturday, November 23, 2024

ಪಂಚಾಯತ್ ರಾಜ್ ಜನಪ್ರತಿನಿಧಿಗಳಿಗೆ “ಹೊ೦ಬೆಳಕು” ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು

ಮ೦ಗಳೂರು: ಪಂಚಾಯತ್ ರಾಜ್ ಹಾಗೂ ನಗರಾಡಳಿತದ ಜನಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಾನಸಿಕ ನೆಮ್ಮದಿ ಹಾಗೂ ಸೌಹಾರ್ದ ಸಂಬಂಧಗಳನ್ನು ಬೆಳೆಸುವ ಉದ್ದೇಶದಿಂದ ಗ್ರಾಮ ಸ್ವರಾಜ್ ಟ್ರಸ್ಟ್ (ರಿ) ಮತ್ತು ಸ್ಥಳೀಯ ಆಡಳಿತಗಳ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪಂಚಾಯತ್‌ ಗಳು, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಸಹಕಾರದೊಂದಿಗೆ
“ಹೊಂಬೆಳಕು” ಎನ್ನುವ ನಾಮಂಕಿತದೊಂದಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಮಾ.2ರ೦ದು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಬಗ್ಗೆ ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ವಿಧಾನಪರಿಷತ್‌ ಸದಸ್ಯ ಹಾಗೂ ಸಂಘಟನಾ ಸಮಿತಿ ಗೌರವಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಈ ಕಾರ್ಯಕ್ರಮಕ್ಕೆ ಈಗಾಗಲೇ ಸರಕಾರದ ಸುತ್ತೋಲೆಯ ಮೂಲಕ ಉಭಯ ಜಿಲ್ಲೆಗಳ ಎಲ್ಲಾ ಸ್ಥಳೀಯ ಆಡಳಿತಗಳ ಜನಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಿರುತ್ತಾರೆ.ಸುಮಾರು 5 ರಿಂದ 6 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎ೦ದರು.

ಆಕರ್ಷಕ ಪಥಸಂಚಲನೆಗಳೊಂದಿಗೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಉಭಯ ಜಿಲ್ಲೆಯ ಶಾಸಕರು , ಸಮಾಜದ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.ಆಕರ್ಷಕ ನಗದು ಬಹುಮಾನಗಳನ್ನು ನೀಡುವುದರ ಜೊತೆಗೆ ಭಾಗವಹಿಸುವ ಸಂಸ್ಥೆಗಳಿಗೆ ಸ್ಮರಣಿಕೆ ಹಾಗೂ ಸದ್ಯಸರಿಗೆ ಟಿ- ಶರ್ಟ್, ಕ್ಯಾಪ್ ನೀಡಲಾಗುವುದು. ಕ್ರೀಡಾಕೂಟದಲ್ಲಿ ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ಗುಂಪು ಹಾಗೂ ವೈಯಕ್ತಿಕ ಸ್ಪರ್ದೆಗಳಿವೆ.ಕ್ರೀಡೆ ಮತ್ತು 5 ವೈಯಕ್ತಿಕ ಕ್ರೀಡೆ ಜೊತೆಗೆ 2 ಸಾಂಸ್ಕೃತಿಕ ಸ್ಪರ್ಧೆಗೆ ಅವಕಾಶವಿದೆ. ಸಿಬ್ಬಂದಿಗೆ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಗುಂಪು ಕ್ರೀಡೆ ಹಾಗೂ ಒಂದು ವೈಯಕ್ತಿಕ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶವಿದೆ ಎ೦ದರು.
ಫೆ. 28 ರ ಒಳಗೆ ನೋಂದಾಯಿಸಲಾದ ಸಂಸ್ಥೆಗಳಿಗೆ ಮಾತ್ರ ಅವಕಾಶವಿದ್ದು ನಂತರದ ನೊಂದಾವಣಿಯನ್ನು ಪರಿಗಣಿಸಲಾಗುವುದಿಲ್ಲ. ಈಗಾಗಲೇ ಪೂರ್ತಿ ಸಿದ್ಧತೆಗಳು ಮಾಡಲಾಗಿದ್ದು ನಮ್ಮ ಸದಸ್ಯರು ಉಭಯ ಜಿಲ್ಲೆಯ ಎಲ್ಲಾ ಪಂಚಾಯತಿಗಳಿಗೆ ಭೇಟಿ ನೀಡಿ ಆಮಂತ್ರಣ ಪತ್ರ ನೀಡಲಿದ್ದಾರೆ. ನಮ್ಮೊಂದಿಗೆ ಪಂಚಾಯಿತಿ ಅಧಿಕಾರಿಗಳ ಸಂಘ ಹಾಗೂ ದೈಹಿಕ ಶಿಕ್ಷಕರ ಸಂಘ ಸಹಕಾರ ನೀಡುತ್ತಿದ್ದು ಕಾರ್ಯಕ್ರಮ ಅದ್ದೂರಿಯಿಂದ ನಡೆಯಲಿದೆ ಎ೦ದವರು ಹೇಳಿದರು.
ಕಾರ್ಯಕ್ರಮಕ್ಕೆ ಸಂಬಂಧಿಸಿದ ಪೋಸ್ಟರ್ ನ್ನು (ಭಿತ್ತಿ ಪತ್ರವನ್ನು) ಬಿಡುಗಡೆಗೊಳಿಸಲಾಯಿತು.
ವಿಧಾನಪರಿಷತ್‌ ಸದಸ್ಯ ಹರೀಶ್ ಕುಮಾರ್, ಟ್ರಸ್ಟ್ ನ ಪ್ರವೀಣ್ ಚ೦ದ್ರ ಆಳ್ವ, ಸುಭಾಷ್ ಚ೦ದ್ರ ಶೆಟ್ಟಿ, ಲಾರೆನ್ಸ್‌ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles