ಮ೦ಗಳೂರು: ನಗರದ ಶೆಟ್ಟಿ ಆಟೋ ಪಾರ್ಕ್, ಅಪ್ಪಣ್ಣ ಕಟ್ಟೆ (ಹಂಪನಕಟ್ಟೆ) ಬಳಿ ದೈತ್ಯಾಕಾರದ ಮರದ ಕೊಂಬೆಯೊಂದು ಮುರಿದು ಬಿದ್ದು ಮೂವರು ವಿದ್ಯಾರ್ಥಿನಿಯರು ತೀವ್ರ ಗಾಯಗೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಪ್ರದೇಶ ಜನನಿಬಿಡವಾಗಿದ್ದು ಏಕಾಏಕಿ ಮರದ ಕೊಂಬೆ ಮುರಿದು ಬಿದ್ದ ಸಂದರ್ಭದಲ್ಲಿ ಅನೇಕ ಸಾರ್ವಜನಿಕರು ಅಲ್ಲೇ ನಿಂತಿದ್ದು ಬಹು ದೊಡ್ಡ ಅವಘಡವೊಂದು ತಪ್ಪಿದೆ.
ಅಧಿವೇಶನದಲ್ಲಿರುವ ಶಾಸಕ ವೇದವ್ಯಾಸ ಕಾಮತ್ ರವರು ವಿಷಯ ತಿಳಿದ ಕೂಡಲೇ ನಿಕಟಪೂರ್ವ ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ಅವರನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿ, ಜಿಲ್ಲಾಧಿಕಾರಿ ಹಾಗೂ ನಗರ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ಗಾಯಾಳುಗಳ ಚಿಕಿತ್ಸಾ ವೆಚ್ಚ ಸಹಿತ ಕೊಂಬೆಯ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
