ಮಂಗಳೂರು:ರಾಷ್ಟ್ರೀಯ ಹೆದ್ದಾರಿ (169) ಸಾಣೂರು-ಬಿಕರ್ನಕಟ್ಟೆ ವಿಭಾಗದ ರಸ್ತೆ ನಿರ್ಮಾಣ ಅಗಲೀಕರಣಕ್ಕಾಗಿ ಭೂಸ್ವಾಧೀನ ಪಡಿಸಲಾದ ಜಮೀನುಗಳ ಭೂಮಾಲೀಕರಿಗೆ ಪÀರಿಹಾರ ಪಾವತಿ ಕಾರ್ಯಕ್ರಮ ಡಿಸೆಂಬರ್ 26 ಬೆಳಿಗ್ಗೆ 11 ಗಂಟೆಗೆ ಕಂದಾವರ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರು ತಾಲೂಕು ಕಂದಾವರ, ಮೂಳೂರು, ಪಡು ಪೆರಾರ, ಬಡಗ ಉಳಿಪಾಡಿ, ತೆಂಕ ಉಳಿಪಾಡಿ ಗ್ರಾಮದಲ್ಲಿ ಭೂಸ್ವಾಧೀನಕ್ಕೆ ಒಳಪಟ್ಟಿರುವ ಜಮೀನಿನ ಮಾಲೀಕರು, ಕ್ಲೈಮ್ ಸಲ್ಲಿಸದ ಭೂ ಮಾಲೀಕರು ಅವಾರ್ಡ್ ನೋಟಿಸಿನಲ್ಲಿ ತಿಳಿಸಿರುವ ದಾಖಲೆಗಳೊಂದಿಗೆ ಹಾಜರಾಗಿ ಕ್ಲೈಮ್ ಸಲ್ಲಿಸಬೇಕು. ಕ್ಲೈಮ್ ಸಲ್ಲಿಸಿದ ಭೂಮಾಲೀಕರು ಪರಿಹಾರ ಪಡೆಯಲು ಸಾಕ್ಷಿದಾರರೊಂದಿಗೆ ಹಾಜರಾಗಿ ಅಗತ್ಯ ದಾಖಲೆಗಳಿಗೆ ಸಹಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.