ಮಂಗಳೂರು:ಇದು ತಂತ್ರಜ್ಞಾನದ ಯುಗ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದಿಂದಾಗಿ ಮನುಷ್ಯನ
ಬಹುತೇಕ ಕೆಲಸಗಳು ಸಲೀಸಾಗಿವೆ. ಆದರೂ ನಮ್ಮಲ್ಲಿ ಈಗ ಸಮಯ ಇಲ್ಲ ಎನ್ನುವ ಮಾತು ಆಶ್ಚರ್ಯ ತರಿಸುತ್ತದೆ.
ಪ್ರಸ್ತುತ ಸನ್ನಿವೇಶದಲ್ಲಿ ಕೌಟುಂಬಿಕ ಮೌಲ್ಯಗಳು ಮಾಯವಾಗುತ್ತಿದೆ ಎಂದು ಎಂಆರ್‌ಪಿಎಲ್‌ನ ಒಎನ್‌ಜಿಸಿ
ಮಂಗಳೂರು ಇದರ ಮುಖ್ಯ ಪ್ರಬಂಧಕ (ರಾಜ ಭಾಷಾ ವಿಭಾಗ) ಡಾ. ಬಿ. ಆರ್. ಪಾಲ್ ವಿಷಾದ ವ್ಯಕ್ತಪಡಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
ಮತ್ತು ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥಾನ, ಪ್ರಯಾಗ್ ರಾಜ್ ಇದರ ಸಂಯುಕ್ತ ಆಶ್ರಯದಲ್ಲಿ ‘ಹಿಂದಿ
ಸಾಹಿತ್ಯದಲ್ಲಿ ವೃದ್ಧ ವಿಮರ್ಶೆ’ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ
ಮಾತನಾಡಿದರು.
ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥಾನದ ಕಾರ್ಯಾಧ್ಯಕ್ಷ ಓಂಪ್ರಕಾಶ್ ತ್ರಿಪಾಠಿ, ಪ್ರಸ್ತುತ ಸನ್ನಿವೇಶದಲ್ಲಿ ವೃದ್ಧಾ
ವಿಮರ್ಶೆ ಎನ್ನುವುದು ಅತಿ ಅವಶ್ಯಕವಾಗಿದೆ. ಈ ಕುರಿತು ಒಂದಷ್ಟು ವಿಚಾರ ಮಂಥನ ನಡೆಯಬೇಕಿದೆ. ಈ ನಿಟ್ಟಿನಲ್ಲಿ
ವಿಚಾರ ಸಂಕಿರಣ ಹೆಚ್ಚು ಪ್ರಾಮುಖ್ಯತೆಯನು ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥಾನದ ಸದಸ್ಯ ಡಾ. ಗೋಕುಲೇಶ್ವರ್ ಕುಮಾರ್ ದ್ವಿವೇದಿ,
ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮ ಟಿ. ಆರ್., ಹಿಂದಿ ಸ್ನಾತಕೋತ್ತರ ವಿಭಾಗದ
ಸಂಯೋಜಕಿ ಡಾ. ನಾಗರತ್ನ ರಾವ್, ಐಕ್ಯೂಎಸಿ ಸಂಯೋಜಕ ಡಾ. ಸಿದ್ದರಾಜು ಎಂ. ಎನ್., ಸಂಸದೀಯ ಸಲಹಾ
ಸಮಿತಿ ಕೋಲ್ ಮಂತ್ರಾಲಯದ ಸದಸ್ಯ ಡಾ. ಪ್ರೇಮ್ ತನ್ಮಯ್, ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಅಶ್ವಿನ್
ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.