ಮ೦ಗಳೂರು: ಎಂಟರ್‌ಪ್ರೈನರ್‌ಶಿಪ್ ಡೆವಲಪ್‌ಮೆಂಟ್ ಪ್ರೋಗ್ರಾಂ 2025 ಸೈ೦ಟ್ ಅಲೋಶಿಯಸ್ ವಿವಿಯ ಎಐಎ೦ಐಟಿ ನ ಶೆಣೈ ಸಭಾಂಗಣದಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ (ಎಂ.ಬಿ.ಎ) ವಿಭಾಗದ ವತಿಯಿಂದ ಆಯೋಜಿಸಲಾಯಿತು.

.ಮುಖ್ಯ ಅತಿಥಿಯಾಗಿ ಪ್ರಖ್ಯಾತ ಉದ್ಯಮಿ ಮತ್ತು ಜ್ಯೋತಿ ಲ್ಯಾಬ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಉಲ್ಲಾಸ್ ಕಾಮತ್ ಅವರು ಪಾಲ್ಗೊಂಡರು. ರೆ। ಫಾ| ಕಿರಣ್ ಕೊತ್ ಎಸ್‌ಜೆ (ಎಐಎ೦ಐಟಿ ನಿರ್ದೇಶಕ), ಡಾ. ರಜನಿ ಸುರೇಶ್ (ಅಕಾಡೆಮಿಕ್ಸ್ ಮತ್ತು ಸಂಶೋಧನಾ ಡೀನ್), ಮಿಸ್ ಬೀನಾ ಡಯಸ್ (ವಿಭಾಗದ ಮುಖ್ಯಸ್ಥೆ), ಕಾರ್ಯಕ್ರಮ ಸಂಯೋಜಕ ಡಾ. ಸ್ವಪ್ನಾ ರೋಸ್ ಮತ್ತು ಕಾರ್ಯಕ್ರಮ ಸಹ ಸಂಯೋಜಕರಾದ ಮಿಸ್ ಪ್ರಥ್ವಿ ಪ್ರಕಾಶ್ ಮತ್ತು ಮಿಸ್ ಲವೀನಾ ನೈಟಿಂಗೇಲ್ ಅವರು ಉಪಸ್ಥಿತರಿದ್ದರು.
ಫೆಡರಲ್ ಬ್ಯಾಂಕ್‌ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಅಜಯ್ ಕಾಮತ್ ಕೆ. ವಥಿಕಾವ್ ಇಂಟರ್‌ನ್ಯಾಷನಲ್ ಟ್ರಾವೆಲ್ಸ್‌ನ ಮಾಲಕಿ ವಥಿಕಾ ಪೈ,ಯುವ ಉದ್ಯಮಿ ಮಾಸ್ಟರ್ ಜಿತೇನ್ ಅರುಣ್ ಅವರು ಉಪನ್ಯಾಸ ನೀಡಿದರು.
, ಓರಾಕಲ್‌ನ ಹಿರಿಯ ವಿಶ್ಲೇಷಕ ಮಿಸೆಸ್ ಶಿಫಾಲಿ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ‘ಮೆಂಟೋಪ್ರಿಚ್’ ಅಧಿವೇಶನ ನಡೆಯಿತು.
